ಭಾರತ, ಫೆಬ್ರವರಿ 12 -- ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕಿಂತ ಹೆಚ್ಚು, ಪರೀಕ್ಷೆಗೆ ಸಿದ್ದತೆ ನಡೆಸುವುದೇ ದೊಡ್ಡ ಚಿಂತೆ. ಓದುವುದು ಹೇಗೆ, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ... ಇಂತಹ ಯೋಚನೆಗಳಿಂದಲೇ ಒತ್ತಡ ಹೆಚ್ಚಾಗುತ್ತವೆ. ಇದು ಪರೀಕ್ಷೆ ಸಮಯದಲ್ಲಿ ಒತ್ತಡ ಹೆಚ್ಚಲು ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ಪರೀಕ್ಷೆಗೆ ಜಾಣತನದಿಂದ ಸಿದ್ದತೆ ನಡೆಸುವುದು ಉತ್ತಮ. ಇನ್ನೇನು ಎಸ್‌ಎಸ್‌ಎಲ್‌ಸಿ (SSLC Exam) ಹಾಗೂ ಪಿಯುಸಿ ಪರೀಕ್ಷೆಗಳು (PUC Exam) ಶುರುವಾಗಲಿವೆ. ಮೊದಲ ಬಾರಿಗೆ ಪ್ರಮುಖ ಪರೀಕ್ಷೆ ಬರೆಯುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಹಜವಾಗಿ ಸ್ವಲ್ಪ ಭಯ ಇರುತ್ತದೆ. ಹೀಗಾಗಿ ಈ ಹಿಂದೆ ಪರೀಕ್ಷೆ ಬರೆದ ಅನುಭವ ಇರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಒಂದಷ್ಟು ಸಲಹೆ ಪಡೆಯಬಹುದು.

ಪರೀಕ್ಷೆಗೆ ಸಿದ್ಧತೆ ನಡೆಸುವುದೆಂದರೆ ಮಕ್ಕಳು ಮಾತ್ರವಲ್ಲದೆ ಪೋಷಕರಿಗೂ ಒತ್ತಡ ಇರುತ್ತದೆ. ಮಕ್ಕಳಿಗೆ ಹೇಗೆಲ್ಲಾ ಸಲಹೆ ಸೂಚನೆ ಕೊಡಬಹುದು ಎಂದು ಪೋಷಕರು ಯೋಚಿಸುತ್ತಾರೆ. ಪರೀಕ್ಷೆ ಎದುರಿ...