Bengaluru, ಏಪ್ರಿಲ್ 21 -- ಅರ್ಥ: ಅರ್ಜುನನು ಪ್ರಶ್ನಿಸಿದನು - ಸದಾ ನಿನ್ನ ಭಕ್ತಿಸೇವೆಯಲ್ಲಿ ಉಚಿತವಾದ ರೀತಿಯಲ್ಲಿ ನಿರತರಾದವರು, ಅವ್ಯಕ್ತವಾದ ನಿರಾಕಾರ ಬ್ರಹ್ಮನನ್ನು ಪೂಜಿಸುವವರು - ಇವರಿಬ್ಬರಲ್ಲಿ ಯಾರು ಹೆಚ್ಚು ಪರಿಪೂರ್ಣರಂದು ಭಾವಿಸಬೆಕು?

ಭಾವಾರ್ಥ: ಕೃಷ್ಣನು ಈಗ ಸಾಕಾರ ರೂಪ, ನಿರಾಕಾರ ರೂಪ ಮತ್ತು ವಿಶ್ವರೂಪ ಈ ಮೂರನ್ನೂ ಮತ್ತು ಎಲ್ಲ ಬಗೆಗಳ ಭಕ್ತರನ್ನೂ ಯೋಗಿಗಳನ್ನೂ ವರ್ಣಿಸಿದ್ದಾನೆ. ಸಾಮಾನ್ಯವಾಗಿ ಆಧ್ಯಾತ್ಮಿಕವಾದಿಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಬಹುದು. ಒಂದು ವರ್ಗ ನಿರಾಕಾರವಾದಿಗಳದು, ಮತ್ತೊಂದು ಸಾಕಾರವಾದಿಗಳದು. ಸಾಕಾರವಾದಿಯಾದ ಭಕ್ತನು ತನ್ನ ಎಲ್ಲ ಶಕ್ತಿಯನ್ನು ಬಳಸಿ ಪರಮ ಪ್ರಭುವಿನ ಸೇವೆಯಲ್ಲಿ ತೊಡಗುತ್ತಾನೆ. ನಿರಾಕಾರವಾದಿಯು ನೇರವಾಗಿ ಕೃಷ್ಣನ ಸೇವೆಯಲ್ಲಿ ತೊಡಗುವುದಿಲ್ಲ, ಅವ್ಯಕ್ತವಾದ ನಿರಾಕಾರ ಬ್ರಹ್ಮನ ಧ್ಯಾನದಲ್ಲಿ ನಿರತನಾಗುತ್ತಾನೆ. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರದ ವಿವಿಧ ಪ್ರಕ್ರಿಯೆಗಳಲ್ಲಿ ಭಕ್ತಿಸೇವೆ ಅಥವಾ ಭಕ್ತಿಯೋಗವೇ ಅತ್ಯುನ್ನತವಾದದ್ದು ಎಂದು ಈ ಅಧ್ಯಾಯದಲ್ಲಿ ಕಾಣುತ್...