Bengaluru, ಏಪ್ರಿಲ್ 23 -- ಅರ್ಥ: ಪರಮ ಪ್ರಭುವಿನ ಅವ್ಯಕ್ತವಾದ ಮತ್ತು ನಿರಾಕಾರವಾದ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ತುಂಬಾ ಕ್ಷೇಶಕರವಾದದ್ದು. ಆ ಶಿಸ್ತಿನಲ್ಲಿ ಮುಂದುವರಿಯುವುದು ದೇಹಧಾರಿಗಳಿಗೆ ಬಹು ಕಷ್ಟ.

ಭಾವಾರ್ಥ: ಪರಮ ಪ್ರಭುವಿನ ಅಚಿಂತ್ಯವೂ, ಅವ್ಯಕ್ತವೂ, ನಿರಾಕಾರವೂ ಆದ ರೂಪದ ಮಾರ್ಗವನ್ನು ಅನುಸರಿಸುವ ಅಲೌಕಿಕವಾದಿಗಳನ್ನು ಜ್ಞಾನಯೋಗಿಗಳೆಂದು ಕರೆಯುತ್ತಾರೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿದ್ದು ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತರಾದವರನ್ನು ಭಕ್ತಿಯೋಗಿಗಳೆಂದು ಕರೆಯುತ್ತಾರೆ. ಇಲ್ಲಿ ಜ್ಞಾನಯೋಗ ಮತ್ತು ಭಕ್ತಿಯೋಗಗಳ ನಡುವಣ ವ್ಯತ್ಯಾಸವನ್ನು ಖಚಿತವಾಗಿ ವಿವರಿಸಿದೆ. ಕಡೆಗೆ ಮನುಷ್ಯನನ್ನು ಅದೇ ಗುರಿಗೆ ಕೊಂಡೊಯ್ದರೂ ಜ್ಞಾನಯೋಗದ ಪ್ರಕ್ರಿಯೆಯು ತುಂಬಾ ಕ್ಷೇಶಕರವಾದದ್ದು. ಆದರೆ ದೇವೋತ್ತಮ ಪರಮ ಪುರುಷನ ನೇರಸೇವೆಯ ಭಕ್ತಿಯೋಗದ ಮಾರ್ಗವು ಇನ್ನೂ ಸುಲಭವಾದದ್ದು ಮತ್ತು ದೇಹಧಾರಿಯಾದ ಆತ್ಮಕ್ಕೆ ಸಹಜವಾದದ್ದು. ಅನಾದಿಕಾಲದಿಂದ ವ್ಯಕ್ತಿಗತ ಆತ್ಮವು ದೇಹದಲ್ಲಿ ವಾಸವಾಗಿದೆ. ತಾನು ದೇಹವಲ್ಲ ಎನ್...