Bengaluru, ಏಪ್ರಿಲ್ 18 -- ಅರ್ಥ: ವೇದಾಧ್ಯಯನ ಮಾತ್ರದಿಂದ ಅಥವಾ ಕಠಿಣ ತಪಸ್ಸಿನಿಂದ ಅಥವಾ ದಾನದಿಂದ ಅಥವಾ ಪೂಜೆಯಿಂದ ನೀನು ನಿನ್ನ ದಿವ್ಯನೇತ್ರಗಳಿಂದ ಕಾಣುತ್ತಿರುವ ನನ್ನ ರೂಪವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇವುಗಳಿಂದ ನಾನಿರುವಂತೆ ನನ್ನನ್ನು ಕಾಣಲು ಸಾಧ್ಯವಿಲ್ಲ.

ಭಾವಾರ್ಥ: ಕೃಷ್ಣನು ತನ್ನ ತಾಯಿತಂದೆಯರಾದ ದೇವಕಿ ಮತ್ತು ವಸುದೇವರಿಗೆ ಮೊದಲ ಬಾರಿ ಚತುರ್ಭುಜ ರೂಪದಲ್ಲಿ ಕಾಣಿಸಿಕೊಂಡ. ಅನಂತರ ಎರಡು ಕೈಗಳ ರೂಪವನ್ನು ಧರಿಸಿದ. ನಾಸ್ತಿಕರಾದವರಿಗೆ ಅಥವಾ ಭಕ್ತಿಸೇವೆ ಮಾಡದವರಿಗೆ ಈ ರಹಸ್ಯ ರೂಪವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ವ್ಯಾಕರಣ ಜ್ಞಾನದಿಂದಷ್ಟೇ ವೈದಿಕ ಸಾಹಿತ್ಯವನ್ನು ಅಭ್ಯಾಸಮಾಡಿದ ಅಥವಾ ವಿದ್ವತ್ತಿನ ಅರ್ಹತೆಗಳನ್ನು ಮಾತ್ರ ಪಡೆದ ವಿದ್ವಾಂಸರು ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರರು. ಪೂಜೆ ಸಲ್ಲಿಸುವುದಕ್ಕಾಗಿ ಅಧಿಕೃತ ರೀತಿಯಲ್ಲಿ ದೇವಸ್ಥಾನಗಳಿಗೆ ಹೋಗುವವರು ಅವನನ್ನು ಅರ್ಥಮಾಡಿಕೊಳ್ಳಲಾರರು. ಅವರು ದೇವಸ್ಥಾನಕ್ಕೆ ಭೇಟಿಕೊಡಬಹುದೇ ಹೊರತು ಕೃಷ್ಣನನ್ನು ಅವನು ಇರುವಂತೆ ಅರ್ಥಮಾಡಿಕೊಳ್ಳಲಾರ...