ಭಾರತ, ಮಾರ್ಚ್ 15 -- ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಶುಕ್ರವಾರ (ಮಾರ್ಚ್‌ 14) ಬೆಂಗಳೂರಿನಲ್ಲಿ ಚಂದನವನದ ಖ್ಯಾತ ಹಿರಿಯ ನಟ, ಪದ್ಮಭೂಷಣ ಡಾ ಅನಂತ್ ನಾಗ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.

ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅನಂತ್‌ ನಾಗ್ ಅವರ‌ ಮನೆಗೆ ತೆರಳಿದ ಸಚಿವರು, ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪ್ರಸ್ತುತ ದೇಶದ ಅನೇಕ ವಿದ್ಯಮಾನಗಳ ಕುರಿತು ಅನಂತ್ ನಾಗ್ ಜೊತೆಗೆ ಪ್ರಹ್ಲಾದ್‌ ಜೋಷಿ ಚರ್ಚಿಸಿದರು. ಭಾರತದ ವಿಶೇಷತೆ ಮತ್ತು ವೈವಿಧ್ಯಮಯ ಇತಿಹಾಸ ಮೊದಲಾದ ವಿಭಿನ್ನ ವಿಷಯಗಳ ಕುರಿತು ಮಾತನಾಡಿದರು.

ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಯಾವ ರೀತಿ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕೆಲಸಮಾಡುತ್ತಿದೆ ಎಂಬುದರ ಬಗ್ಗೆಯೂ ಅನಂತ್‌ ನಾಗ್‌ ಅವರಿಗೆ ಜೋಶಿ ವಿವರಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಅವರ ಪತ್ನಿ ಹಾಗೂ ಹಿರಿಯ ನಟಿ ಗಾಯತ್ರಿ, ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ ಸಿ.ಎನ್ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Publishe...