Bangalore, ಜನವರಿ 26 -- ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಈ ಕುರಿತು ಹಿರಿಯ ನಟ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಖುಷಿ ತಂದಿದೆ. ಕನ್ನಡಿಗರು ಇದಕ್ಕಾಗಿ ಅಭಿಯಾನ ಮಾಡಿದ್ದರು. ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ನೀಡುವ ರೀತಿ ಬೇರೆ ಇತ್ತು. ಮೂರು ವರ್ಷದ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದರಲ್ಲಿ ಸಾರ್ವಜನಿಕರು ಹೆಚ್ಚು ಪಾಲ್ಗೊಳ್ಳಬೇಕು ಎಂದು ಘೋಷಣೆ ಮಾಡಿದರು. ಆ ಘೋಷಣೆ ಬಂದ ನಂತರ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಅಭಿಯಾನ ನಡೆಸಿ ನನ್ನ ಹೆಸರು ಸೂಚಿಸಿದ್ದರು. ಯಾರೂ ತಮ್ಮ ತಮ್ಮ ಹೆಸರು ಸೂಚಿಸಿಲ್ಲ, ಅಷ್ಟೊಂದು ನಿಸ್ವಾರ್ಥಿಗಳು, ಕನ್ನಡಿಗರ ಪ್ರೀತಿ ದೊಡ್ಡದು. ಆ ವರ್ಷ ಪ್ರಶಸ್ತಿ ಬರಲಿಲ್ಲ. ಅದರ ನಂತರ ವರ್ಷವೂ ಇದೇ ರೀತಿ ಮಾಡಿದರು. ಮೂರು ವರ್ಷದಿಂದ ಸತತವಾಗಿ ಈ ರೀತಿಯ ಅಭಿಯಾನ ಮಾಡಿದ್ದಾರೆ. ನನಗೆ ಬಂತು ಅಥವಾ ಬರಲಿಲ್ಲ ಎಂಬ ಸುಖವೂ ಇಲ್ಲ ದುಃಖವೂ ಇಲ್ಲ. ಆದರೆ, ನನಗಾಗಿ ಅಭಿಯಾನ ಮಾಡಿದ ಕನ್ನಡಿಗರಿಗೆ ಖುಷಿಯಾಗುತ್ತದೆ ಎನ್ನುವುದು ನನಗೆ ಸಂತೋಷ ತಂದಿದೆ" ಎಂದು...