ಭಾರತ, ಫೆಬ್ರವರಿ 27 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 26ರ ಸಂಚಿಕೆಯಲ್ಲಿ ಶಿವರಾತ್ರಿ ಹಬ್ಬದ ಆಚರಣೆ ಸಂದರ್ಭ ಎಲ್ಲರೆದುರು ಸೊಸೆ ಮಗನ ಕೆನ್ನೆಗೆ ಮುತ್ತು ನೀಡಿದ್ದನ್ನು ನೋಡಿ ಇನ್ನಷ್ಟು ಕೋಪ ಮಾಡಿಕೊಂಡಿರುತ್ತಾರೆ ವಿಶಾಲಾಕ್ಷಿ. ಅದನ್ನು ಗಂಡನ ಬಳಿಯೂ ಹೇಳಿ ಸೊಸೆಯನ್ನು ದೂರುತ್ತಾರೆ. ಆದರೆ ಪದ್ಮನಾಭ ಮಾತ್ರ ಎಲ್ಲವೂ ಶಿವನಿಚ್ಛೆ ಎಂಬಂತೆ ಮಾತನಾಡುತ್ತಾರೆ. ಇತ್ತ ಸುಬ್ಬು ಶ್ರಾವಣಿ ಮೇಡಂ ಮುತ್ತು ಕೊಟ್ಟಿದ್ದನ್ನೇ ನೆನಪಿಸಿಕೊಂಡು ಮುಖ ಊದಿಸಿ ಕುಳಿತಿರುತ್ತಾನೆ. ಶ್ರಾವಣಿ ಗಂಡನ ಕೋಪವನ್ನು ನೋಡಿಯೂ ಅವನಿಗೆ ಕಿಚಾಯಿಸುತ್ತಾಳೆ. ಮಾತ್ರವಲ್ಲ ಇಂದಲ್ಲ ನಾಳೆ ಅವನ ಕೋಪ ಕರಗಿ ಅವನು ತನಗೆ ಹತ್ತಿರವಾಗಿಯೇ ಆಗುತ್ತಾನೆ ಎಂದು ಮನದಲ್ಲೇ ಅಂದುಕೊಳ್ಳುತ್ತಾಳೆ. ಶಿವರಾತ್ರಿಯಲ್ಲಿ ಶಿವನ ಕೋಪದಂತೆ ನನ್ನ ಗಂಡನ ಕೋಪ, ಆಮೇಲೆ ಅವನ ಕೋಪ ತಾನಾಗಿಯೇ ಕರಗುತ್ತದೆ ಎಂದು ಶ್ರಾವಣಿ ದೇವರಲ್ಲಿ ಮನೆಯವರೆಲ್ಲರೂ ಖುಷಿಯಾಗಿ ಇರುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾಳೆ.

ಪದ್ಮನಾಭ ಸೊಸೆ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಕದ್ದು ಕೆಲಸಕ್ಕ...