ಭಾರತ, ಜನವರಿ 29 -- ನಮ್ಮ ಆಲೋಚನೆಗಳು ಮಾನಸಿಕ ಆರೋಗ್ಯದ ಮೇಲಷ್ಟೇ ಅಲ್ಲ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರೆ ನಂಬ್ತೀರಾ, ಖಂಡಿತ ನಂಬಲೇಬೇಕು. ಇದು ಆಶ್ಚರ್ಯ ಎನ್ನಿಸಿದ್ರೂ ಸತ್ಯ. ನಮ್ಮ ನಕಾರಾತ್ಮಕ ಯೋಚನೆಗಳು ನಮ್ಮ ಮನಸ್ಥಿತಿಯನ್ನು ಕೆಡಿಸುವುದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ಉಂಟು ಮಾಡಬಹುದು.

ನಕಾರಾತ್ಮಕ ಚಿಂತನೆಯಲ್ಲಿ ಸಿಲುಕಿಕೊಂಡಾಗ ದೇಹವು ಒತ್ತಡದ ಸ್ಥಿತಿಯಲ್ಲಿ ಉಳಿಯುತ್ತದೆ. ಇದರಿಂದ ಹೃದಯ, ಪ್ರತಿರಕ್ಷಣಾ ವ್ಯವಸ್ಥೆ ಹಾಗೂ ದೇಹದ ಇತರ ಭಾಗಗಳಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕಾಲಾನಂತರದಲ್ಲಿ ಇದು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.

ಹೃದಯ ಸಂಬಂಧಿ ಸಮಸ್ಯೆಯಿಂದ ಹಿಡಿದು ರೋಗನಿರೋಧಕ ಶಕ್ತಿ ಕಡಿಮೆಯಾಗುವುದು, ಮಾನಸಿಕ ಆರೋಗ್ಯ ಕೆಡುವವರೆಗೆ ಸಾಕಷ್ಟು ಸಮಸ್ಯೆಗಳು ಇದರಿಂದ ಎದುರಾಗುತ್ತದೆ. ಆದರೆ ಮಾನಸಿಕ ಸ್ಥಿತಿಯನ್ನು ಬದಲಿಸಿಕೊಳ್ಳುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ನಕಾರಾತ್ಮಕ ಯೋಚನೆಗಳಿಂದ ಏನೆಲ್ಲಾ ಸಮಸ್ಯೆಗಳು ಎದು...