ಭಾರತ, ಮಾರ್ಚ್ 28 -- ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಸ್ಮರಣಾರ್ಥ ಇದೇ ಏಪ್ರಿಲ್ 4ನೇ ತಾರೀಕಿನಂದು ಆಯೋಜಿಸಿದ್ದ "ಖಾಸ್ ಗೀತ್"- ಎಂದೂ ಮರೆಯದ ಹಾಡು ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಸ್ಮರಣಾರ್ಥ ಏಪ್ರಿಲ್ 4 ರಂದು 'ಖಾಸ್ ಗೀತ್' ಎಂದೂ ಮರೆಯದ ಹಾಡು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪತ್ರಕರ್ತ ಅಜಿತ್ ಹನುಮಕ್ಕನವರ್ ಈ ಕಾರ್ಯಕ್ರಮದ ನಿರೂಪಣೆ ಮಾಡಬೇಕಿತ್ತು. ಹಳೆಯ ಹಿಂದಿ- ಕನ್ನಡ ಇತರ ಪ್ರಾದೇಶಿಕ ಭಾಷೆಯ ಹಾಡುಗಳು ಈ ದಿನ ನಿಮ್ಮ ಕಿವಿಗಳನ್ನು ಇಂಪಾಗಿಸಲಿದ್ದವು. ರಾಮಚಂದ್ರ ಹಡಪದ, ಹರ್ಷ ರಂಜಿನಿ ಹಾಗೂ ಸ್ಪರ್ಶ ಆರ್‌ಕೆ ಹಾಡುಗಳಿಗೆ ಧ್ವನಿಯಾಗಲಿದ್ದರು. ಒಟ್ಟು ಮೂರು ಗಂಟೆಗಳ ಕಾರ್ಯಕ್ರಮ ಇದಾಗಲಿದ್ದು, ಸಂಜೆ 5.30ಕ್ಕೆ ಆರಂಭವಾಗಲಿದೆ. ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌ನಲ್ಲಿ ಕಾರ್ಯಕ್ರಮ ನಡೆ...