Greece, ಮೇ 11 -- ತಂತ್ರಜ್ಞಾನ ಎನ್ನುವುದು ಎಲ್ಲಿಗೆ ಬಂದಿದೆ ಎನ್ನುವುದಕ್ಕೆ ಈ ವೈರಲ್‌ ಸುದ್ದಿ ಸಾಕ್ಷಿ ಒದಗಿಸಿದೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನವಿದ್ದ ಪತ್ನಿ ಅದನ್ನು ಪತ್ತೆ ಮಾಡಲು ಬಳಿಸಿದ್ದು ಚಾಟ್‌ಜಿಪಿಟಿ ಎನ್ನುವ ತಂತ್ರಜ್ಞಾನವನ್ನೂ. ಅದರಲ್ಲೂ ನಿತ್ಯ ಬಳಸುವ ಕಾಫಿ ಕಪ್‌ನ ಮೂಲಕ ಇಂತಹದೊಂದು ಗೂಢಚಾರಿಕೆಯನ್ನೂ ಮಾಡಿದ ಮಹಿಳೆಗೆ ಚಾಟ್‌ಜಿಪಿಟಿ ಮಾಹಿತಿಯನ್ನು ಒದಗಿಸಿದೆ.ಪತಿಯ ವಿರುದ್ದ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಆದರೆ ಇಬ್ಬರು ಮಕ್ಕಳ ತಾಯಿಯಾದ ನಂತರವೂ ಪತ್ನಿಗೆ ಅನುಮಾನ, ತಂತ್ರಜ್ಞಾನವನ್ನು ಎಲ್ಲೆಡೆ ಬಳಸುವ ಖಯಾಲಿ. ಈಗ ನನ್ನ ಮೇಲೆಯೇ ಅನಗತ್ಯ ಗುಮಾನಿ ವ್ಯಕ್ತಪಡಿಸಿದ್ದಾಳೆ ಎನ್ನುವುದು ಪತಿ ನೀಡಿರುವ ವಿವರಣೆ. ನ್ಯಾಯಾಲಯಲ್ಲಿ ಈಗಾಗಲೇ ಪತ್ನಿ ದಾಖಲಿಸಿದ ದೂರು ಆಧರಿಸಿ ವಿಚಾರಣೆ ನಡೆದಿದ್ದು, ತೀರ್ಪು ಬಾಕಿಯಿದೆ.

Published by HT Digital Content Services with permission from HT Kannada....