ಭಾರತ, ಮೇ 14 -- ಮಂಗಳೂರು: ಕರಾವಳಿ ಎಂದರೆ ಕಮ್ಯೂನಲ್ ಎಂದು ಬ್ರಾಂಡ್ ಮಾಡುತ್ತಿರುವವರು, ಹಿಂದೂ ಹಾಗೂ ಮುಸ್ಲಿಮರು ಸೋದರರಂತೆ ಬಾಳ್ವೆ ನಡೆಸುವ ಅನೇಕ ನಿದರ್ಶನಗಳನ್ನು ಮರೆಮಾಚುತ್ತಾರೆ ಎಂಬ ಆರೋಪವಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಹಿಂದೂಗಳು ಪೂಜಿಸುವ ದೈವಗಳ ಕಾರ್ಯಕ್ರಮದಲ್ಲಿ ಮುಸ್ಲಿಮರ ಸಹಭಾಗಿತ್ವ ಒಗ್ಗಟ್ಟಿನ ಭ್ರಾತೃತ್ವದ ದ್ಯೋತಕವಾಗಿ ಗಮನ ಸೆಳೆದಿದೆ.

ಪುತ್ತೂರಿನ ಹೊರವಲಯದ ಕೊಡಿಪ್ಪಾಡಿ ಗ್ರಾಮದ ಕಲೆಂಬಿಯ ಗುಳಿಗ ಗುರಿ ಎಂಬಲ್ಲಿ ಜೀರ್ಣೋದ್ಧಾರಗೊಂಡಿರುವ ಪಂಜುರ್ಲಿ ದೈವಸ್ಥಾನ ಮತ್ತು ಗುಳಿಗೆ ಕಟ್ಟೆಯ ಪ್ರತಿಷ್ಠಾ ಕಾರ್ಯಕ್ರಮ ಮಂಗಳವಾರ ನಡೆದಿತ್ತು. ಪುತ್ತೂರು ಶಾಸಕ ಆಶೋಕ್ ರೈ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಪ್ರಾಚೀನ ಹಿನ್ನೆಲೆ ಇರುವ ಈ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯ 8 ತಿಂಗಳಲ್ಲಿ ಪೂರ್ಣಗೊಂಡು ಪ್ರತಿಷ್ಠಾ ಕಾರ್ಯಕ್ರಮ ನಡೆದಿದೆ. ಸ್ಥಳೀಯ ಮುಖಂಡರ ನೇತೃತ್ವದ ಸಮಿತಿಯ ಮೂಲಕ ಜೀರ್ಣೋದ್ದಾರ ನಡೆದಿದ್ದು, ಇಲ್ಲಿನ ಮುಸ್ಲಿಂ ಕುಟುಂಬಗಳು ಸಹಕಾರ ನೀಡಿರುವುದು ವಿಶೇಷ....