ಭಾರತ, ಏಪ್ರಿಲ್ 13 -- ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಐಪಿಎಲ್‌ 2025ರ ಆವೃತ್ತಿಯಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸಿದೆ. ಯುವ ಅರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಸ್ಫೋಟಕ ಆಟಕ್ಕೆ ಹಳೆಯ ಹಲವು ದಾಖಲೆಗಳೇ ನಿರ್ನಾಮವಾಗಿದೆ. ಪಂಜಾಬ್‌ ಕಿಂಗ್ಸ್‌ ವಿರುದ್ಧ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಆರೇಂಜ್‌ ಆರ್ಮಿ, ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿತು. ಆ ಮೂಲಕ, ಸತತ ನಾಲ್ಕು ಸೋಲುಗಳ ಬಳಿಕ ಕೊನೆಗೂ ಗೆಲುವಿನ ಹಳಿಗೆ ಮರಳಿತು. ಅಭಿಷೇಕ್‌ ದಾಖಲೆಯ ಶತಕ ಬಾರಿಸಿದರೆ, ತಂಡವು ಐಪಿಎಲ್‌ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ರನ್‌ ಚೇಸಿಂಗ್‌ ಮಾಡಿದ ದಾಖಲೆ ನಿರ್ಮಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಕಿಂಗ್ಸ್‌, 6 ವಿಕೆಟ್‌ ಕಳೆದುಕೊಂಡು 245 ಗಳಿಸಿತು. ಬೃಹತ್‌ ಗುರಿ ಚೇಸ್‌ ಮಾಡಿದ ಹೈದರಾಬಾದ್‌, 9 ಎಸೆತಗಳನ್ನು ಬಾಕಿ ಉಳಿಸಿ ಗುರಿ ತಲುಪಿತು. ಪಂದ್ಯದಲ್ಲಾದ ವಿವಿಧ ದಾಖಲೆಗಳ ಪಟ್ಟಿ ಇಲ್ಲಿದೆ.

ಇದನ್ನೂ ಓದಿ...