ಭಾರತ, ಏಪ್ರಿಲ್ 12 -- ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ತಂಡದ ಹಳೆಯ ಜೋಶ್‌, ಆರ್ಭಟ, ಆಕ್ರಮಣಕಾರಿ ಆಟ ಮೈದಾನದಲ್ಲಿ ಹಲವು ದಿನಗಳ ನಂತರ ಮೊದಲ ಬಾರಿಗೆ ಕಂಡುಬಂದಿದೆ. ತನ್ನದೇ ತವರು ಮೈದಾನ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಬ್ಬರಿಸಿದ ಆರೇಂಜ್‌ ಆರ್ಮಿ, 8 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿದೆ. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ, ದಾಖಲೆಯ ಶತಕ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದ್ದಾರೆ. ಈ ವಿಜಯದೊಂದಿಗೆ ಎಸ್‌ಆರ್‌ಎಚ್‌ ತಂಡವು ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌, ಸ್ಫೋಟಕ ಬ್ಯಾಟಿಂಗ್‌ ನಡೆಸಿ 6 ವಿಕೆಟ್‌ ಕಳೆದುಕೊಂಡು 245‌ ರನ್ ಪೇರಿಸಿತು. ಈ ಮೊತ್ತವನ್ನು ಹೈದರಾಬಾದ್‌ ತಂಡ ಚೇಸ್‌ ಮಾಡಲ್ಲ ಎಂದು ನಂಬಲಾಗಿತ್ತು. ಆದರೆ, ಸ್ಫೋಟಕ ಬ್ಯಾಟರ್‌ಗಳ ದೊಡ್ಡ ಪಡೆಯೇ ಹೊಂದಿರುವ ಆರೇಂಜ್‌ ಆರ್ಮಿ, ಇನ್ನೂ ...