ಭಾರತ, ಏಪ್ರಿಲ್ 30 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಹೊರಬಿದ್ದಿತು. ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವೂ ಆಗಿದೆ. ಗುಂಪು ಹಂತದ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ಸೋಲಿನೊಂದಿಗೆ ಪ್ಲೇಆಫ್ ರೇಸ್ನಿಂದ ಹೊರಬಿತ್ತು. ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ಸತತ 5ನೇ ಹಾಗೂ ಒಟ್ಟು 8ನೇ ಸೋಲಿನೊಂದಿಗೆ ತನ್ನ ಕನಸು ಭಗ್ನಗೊಂಡಿತು. ಮತ್ತೊಂದೆಡೆ 6ನೇ ಗೆಲುವು ದಾಖಲಿಸಿದ ಪಂಜಾಬ್ 13 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯದೇ ಇದ್ದರೂ ಅತ್ಯುತ್ತಮ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಬೌಲಿಂಗ್ ಟ್ರ್ಯಾಕ್ನಲ್ಲಿ 190 ರನ್ ಕಲೆ ಹಾಕುವ ಮೂಲಕ ತವರಿನಲ್ಲಿ ಸೋಲಿನ ಸರಪಳಿ ಕಳಚುವ ಭರವಸೆಯಲ್ಲಿತ್ತು. ಸ್ಯಾಮ್ ಕರನ್ ಆಕರ್ಷಕ 88 ರನ್ ಗಳಿಸಿ ಉತ್ತಮ ಮೊತ್ತ ಕಲೆ ಹಾಕಿ ನೆರವಾಗಿದ್ದರು. 19ನೇ ಓವರ್ನಲ್ಲಿ ಯ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.