ಭಾರತ, ಮಾರ್ಚ್ 14 -- ಕಾಲ ಎಂಬುದು ಬಹು ವಿಸ್ತಾರ ವಿಷಯ. ಕಾಲದಲ್ಲಿ ಅನೇಕಾನೇಕ ವಿವರಗಳಿವೆ. ಈ ಪೈಕಿ ನಮ್ಮ ನಿತ್ಯ ಬದುಕಿಗೆ ಬೇಕಾಗುವುದ ಕೆಲವೇ ಕೆಲವು ಅಂಶಗಳು. ಪಂಚಾಂಗ ಅದರಲ್ಲಿ ಬಹಳ ಮುಖ್ಯ. ಬಹುತೇಕ ಭಾರತೀಯರ ನಿತ್ಯ ಬದುಕು ಶುರುವಾಗುವುದೇ ಪಂಚಾಂಗ ನೋಡುವ ಮೂಲಕ. ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ವಾರ, ತಿಥಿ ಮುಂತಾದ ಅಂಶಗಳನ್ನು ಗಮನಿಸಿಯೇ ಕೆಲಸ ಮಾಡುವ ಪರಿಪಾಠ ಮುಂದುವರಿದಿದೆ. ಹೀಗಾಗಿ, ಪಂಚಾಂಗ ಕಿರುಪರಿಚಯ ಎಲ್ಲರಿಗೂ ಇರಲಿ ಎಂಬ ಆಶಯ ಇದರಲ್ಲಿದೆ.

ಭಾರತೀಯರು ಕಾಲ ನೋಡುವ ಸಾಧನವೇ ಪಂಚಾಂಗ. ಕಾಲದಲ್ಲಿ ಅನೇಕಾನೇಕ ವಿವರಗಳಿವೆ. ಈ ಪೈಕಿ ಮನುಷ್ಯರ ನಿತ್ಯಬದುಕಿಗೆ ಬೇಕಾದ್ದು 5 ಅಂಶಗಳು. ಆ 5 ಅಂಶಗಳನ್ನು ಒಳಗೊಂಡ ವಿವರವೇ ಪಂಚಾಂಗ. ಪಂಚಾಂಗದ 5 ಅಂಶಗಳಿವು ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ವಾಸ್ತವದಲ್ಲಿ ಭಾರತೀಯರ ಜೀವನವೇ ಪಂಚಾಂಗವನ್ನು ಆಧರಿಸಿದೆ. ಭಾರತೀಯರ ಕಾಲಗಣನೆಯು ಜೀವನಕ್ಕೆ ನೇರವಾಗಿ ಸಂಬಂಧಪಟ್ಟದ್ದು. ಇದನ್ನು ಇನ್ನಷ್ಟು ವಿವರಿಸಬೇಕಾದರೆ ಸಂಸ್ಕೃತದ ಈ ಶ್ಲೋಕದ ಕಡೆಗೊಮ್ಮೆ ಗಮನಹ...