ಭಾರತ, ಮೇ 24 -- ಅಮೃತಧಾರೆ ಧಾರಾವಾಹಿಯಲ್ಲಿ ತನ್ನನ್ನು ಹುಡುಕಿಕೊಂಡು ಕನಕದುರ್ಗಾಕ್ಕೆ ಇಬ್ಬರು ಬಂದಿದ್ದಾರೆ ಎಂಬ ವಿಚಾರ ಶಕುಂತಲಾದೇವಿಗೆ ತಿಳಿಯುತ್ತದೆ. ತನ್ನ ರಹಸ್ಯವನ್ನು ನಾಶ ಮಾಡಲು ಶಕುಂತಲಾದೇವಿ ಪ್ರಯತ್ನಿಸುತ್ತಾಳ? ಅಥವಾ ಈಕೆಯ ರಹಸ್ಯ ಗೌತಮ್‌ಗೆ ತಿಳಿಯುತ್ತದೆಯೇ?

ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆ ಮಹಾ ಸಂಚಿಕೆ ನಡೆದಿದೆ. ಒಂದು ಗಂಟೆಯ ಸಂಚಿಕೆಯಲ್ಲಿ ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಮತ್ತು ಆನಂದ್‌ ಮಾಡುವ ಪ್ರಯತ್ನಗಳ ವಿವರವಿತ್ತು. ಇವರಿಬ್ಬರು ಆ ಊರಿನಲ್ಲಿ ಪಂಕಜಾಳ ಕುರಿತು ವಿಚಾರಿಸುತ್ತಾರೆ.

ಆ ಹಳ್ಳಿಯಲ್ಲಿ ಪಂಕಜಾಳ ಬಗ್ಗೆ ಯಾರಿಗೆಲ್ಲ ಗೊತ್ತು ಎಂದು ಹುಡುಕುತ್ತಿದ್ದಾರೆ. ಆದರೆ, ಅವರಿಬ್ಬರಿಗೆ ಮಹತ್ವದ ಸುಳಿವು ದೊರಕುವುದಿಲ್ಲ. ಕೊನೆಗೆ ನಂಜಮ್ಮನ ಗಂಡನೇ ಬಾರ್‌ನಲ್ಲಿ ಸಿಕ್ಕಾಗ ಪರಿಸ್ಥಿತಿ ಬದಲಾಗುತ್ತದೆ.

ನಂಜಮ್ಮನ ಕೈಯಲ್ಲಿ ಸಾಕಷ್ಟು ಹಣ ಇದೆ. ಶಕುಂತಲಾದೇವಿಯಿಂದ ಹಣ ಪಡೆದಿದ್ದಳು. ಆ ಹಣವನ್ನು ಗಂಡನಿಗೂ ನೀಡಿದ್ದಾಳೆ. ಚೆನ್ನಾಗಿ ಕುಡಿ ಎಂದು ಹಣ ನೀಡಿದ್ದಾಳೆ.

ಹಣ ಸಿಕ್ಕಾಗ ನಂಜಮ...