Bengaluru, ಮೇ 16 -- ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹಿರಿಮಗಳು ಧೃತಿ ಪುನೀತ್‌ ರಾಜ್‌ಕುಮಾರ್‌ ಇದೀಗ ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ವಿದೇಶದಲ್ಲಿಓದು ಮುಗಿಸಿ, ಪದವಿಯನ್ನೂ ಪಡೆದು ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ಧೃತಿ ಪಡೆದ ಪದವಿ ಯಾವುದು? ಇಲ್ಲಿದೆ ವಿವರ.

ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಕಿರಿ ಮಗಳು ವಂದಿತಾ ಬೆಂಗಳೂರಿನಲ್ಲಿದ್ದರೆ, ಹಿರಿಮಗಳು ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.

ಸಹಜವಾಗಿ ಸಿನಿಮಾ ನಟರ ಮಕ್ಕಳು, ಕಲಾವಿದರಾದ ಉದಾಹರಣೆಗಳು ಅಧಿಕ. ಆದರೆ, ಪುನೀತ್‌ ರಾಜ್‌ಕುಮಾರ್‌ ಹಿರಿಮಗಳು ಧೃತಿ ಮಾತ್ರ ಸಿನಿಮಾ ಹಿಂದಿನ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದೀಗ ಇದೇ ಧೃತಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ನ್ಯೂಯಾರ್ಕ್‌ನ ʻಪಾರ್ಸ...