ಭಾರತ, ಮಾರ್ಚ್ 2 -- ವರುಣ್ ಚಕ್ರವರ್ತಿ (42ಕ್ಕೆ 5) ಅವರ ಖಡಕ್ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ 44 ರನ್​ಗಳಿಂದ ಜಯಿಸಿದ ಭಾರತ ತಂಡ, ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಲೀಗ್ ಅಭಿಯಾನ ಮುಗಿಸಿದೆ. ಈ ಗೆಲುವಿನೊಂದಿಗೆ ಮಾರ್ಚ್​ 4ರಂದು ಮೊದಲ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸೋತರೂ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದ ಕಿವೀಸ್, ಮಾರ್ಚ್ 5ರಂದು ನಡೆಯುವ ಸೌತ್ ಆಫ್ರಿಕಾ ವಿರುದ್ಧ 2ನೇ ಸೆಮೀಸ್​ನಲ್ಲಿ ಸೆಣಸಾಟ ನಡೆಸಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 205ಕ್ಕೆ ಆಲೌಟ್ ಆಯಿತು.

ಚಾಂಪಿಯನ್ಸ್ ಟ್ರೋಫಿಯ ಲೀಗ್​ ಹಂತದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮೀಸ್​​ಗೆ ಎಂಟ್ರಿಕೊಟ್ಟಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿತ್ತು. ಬಳಿಕ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧವ...