ಭಾರತ, ಜನವರಿ 30 -- ಇತ್ತೀಚೆಗೆ ಕ್ಯಾನ್ಸರ್ ರೋಗ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್‌ ರೋಗ ಪತ್ತೆ ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಅಂಕಾಲಜಿ ತಜ್ಞ ಡಾ.ಸಾನ್ಯೋ ಡಿಸೋಜಾ ಅವರ ಬರಹ ಇಲ್ಲಿದೆ. ವೈರಸ್‌, ಬ್ಯಾಕ್ಟೀರಿಯಾ ಹಾಗೂ ಫಂಗಸ್‌ ಶ್ವಾಸನಾಳವನ್ನು ಹೊಕ್ಕು ಸೃಷ್ಟಿಸುವ ಸೋಂಕಿನಿಂದ ನ್ಯುಮೋನಿಯಾ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಈ ನ್ಯುಮೋನಿಯಾಗೆ ಸಾಮಾನ್ಯವಾಗಿ ಕಾರಣವಾಗುವ ವೈರಸ್‌ ಎಂದರೆ ಅದು ಫ್ಲೂ ವೈರಸ್‌ಗಳು. ಅತಿಯಾದ ಧೂಮಪಾನ, ವಾತಾವರಣದಲ್ಲಿನ ವಿಷಕಾರಿ ಅನಿಲ ಸೇವನೆಯಿಂದ ಶ್ವಾಸಕೋಶದಲ್ಲಿ ಜೀವಕೋಶಗಳ ಅನಿಯಮಿತವಾದ ಬೆಳವಣಿಗೆ, ಜೀವಕೋಶಗಳಲ್ಲಿ ರೂಪಾಂತರಗಳಿಂದ ಶ್ವಾಸಕೋಶ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಬಳಿಕ ಕ್ಯಾನ್ಸರ್‌ ಪತ್ತೆಯಾಗುವುದು ಹೆಚ್ಚು. ಆದರೆ ಪತ್ತೆಯಾದ ಪ್ರಕರಣಗಳಲ್ಲಿ ಶೇ.50 ರಷ್ಟು ಪ್ರಕರಣಗಳಲ್ಲಿ ಕ್ಯಾನ್ಸರ್‌ ರೋಗಿಯ ವಿವಿಧ ಅಂಗಗಳಿಗೂ ಹರಡಿರುತ್ತದೆ. ಶ್ವಾಸಕ...