ಭಾರತ, ಏಪ್ರಿಲ್ 27 -- ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದ ರಶ್ಮಿಕಾ ಮಂದಣ್ಣಗೆ ಈಗ ಬಾಲಿವುಡ್‌ನಲ್ಲೂ ಭಾರಿ ಬೇಡಿಕೆ. ಆಕೆ ಈಗಾಗಲೇ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ, ಮಾತ್ರವಲ್ಲ ಈಕೆ ನಟಿಸಿರುವ ಸಿನಿಮಾಗಳು ಹಿಟ್ ಆಗಿವೆ. ಪುಷ್ಪಾದಂತಹ ಸೂಪರ್ ಡೂಪರ್ ಹಿಟ್ ಚಿತ್ರದಲ್ಲೂ ರಶ್ಮಿಕಾ ನಾಯಕಿ. ಆದರೆ ರಶ್ಮಿಕಾ ಮಂದಣ್ಣ ತಿರಸ್ಕರಿಸಿದ್ದ ಕೆಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದವು. ನ್ಯಾಷನಲ್ ಕ್ರಶ್ ತಿರಸ್ಕರಿಸಿ, ಬಾಕ್ಸ್ ಆಫೀಸ್‌ನಲ್ಲಿ ಕಂಡ ಚಿತ್ರಗಳು ಯಾವುದು ನೋಡಿ.

ಮಾಸ್ಟರ್: 2021ರಲ್ಲಿ, ರಶ್ಮಿಕಾ ಮಂದಣ್ಣ ಮಾಸ್ಟರ್ ಚಿತ್ರದ ಆಫರ್ ಅನ್ನು ತಿರಸ್ಕರಿಸಿದರು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಶ್ಮಿಕಾ ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದ ಈ ಚಿತ್ರವನ್ನು ತಿರಸ್ಕರಿಸಿದ್ದರು. ರಶ್ಮಿಕಾ ಒಲ್ಲೆ ಎಂದ ಈ ಚಿತ್ರಕ್ಕೆ ಮಾಳವಿಕಾ ಮೋಹನ್ ಆಯ್ಕೆಯಾಗುತ್ತಾರೆ.

ಶಾಹಿದ್ ಕಪೂರ್ ನಟನೆಯ 'ಜೆರ್ಸಿ' ಚಿತ್ರದಲ್ಲಿ ಶಾಹಿದ್ ಕಪೂರ್ ಪತ್ನಿ ವಿದ್ಯಾ ತಲ್ವಾರ್ ಪಾತ್ರದಲ್ಲಿ ನಟಿಸ...