ಭಾರತ, ಮೇ 5 -- 'ನಾನು ಟ್ಯೂಷನ್‌ಗೆ ಹೋಗಿಲ್ಲ, ಪರೀಕ್ಷೆ ಸಮಯದಲ್ಲಿ ಟೆನ್‌ಷನ್‌, ಪ್ರೆಶರ್ ಕೂಡ ತಗೊಂಡಿಲ್ಲ. ಪರೀಕ್ಷೆ ಕೊನೆ ಹಂತದಲ್ಲಿ ಒತ್ತಡ, ಭಯ ಆವರಿಸಿದ್ರೆ ಗೊಂದಲ ಶುರುವಾಗುತ್ತೆ' ಎನ್ನುವ ಶಿವಮೊಗ್ಗ ಸಹಿಷ್ಣು ಎನ್‌. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ಶಿವಮೊಗ್ಗದ ಶ್ರೀ ಆದಿ ಚುಂಚನಗಿರಿ ಕಾಂಪೊಸಿಟ್ ಇಂಗ್ಲಿಷ್‌ ಹೈಸ್ಕೂಲ್‌ನ ವಿದ್ಯಾರ್ಥಿ ಆಗಿರುವ ಸಹಿಷ್ಣು ತಂದೆ-ತಾಯಿ ಇಬ್ಬರೂ ಶಿಕ್ಷಕರು. ತಂದೆ ನಾಗರಾಜ ಎ.ಕೆ. ಹಾಗೂ ತಾಯಿ ಪ್ರತಿಮಾ. ತಂದೆ ಕನ್ನಡ ಶಿಕ್ಷಕರಾದರೆ, ತಾಯಿ ಗಣಿತ ಶಿಕ್ಷಕಿ. ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ಸಹಿಷ್ಣು ಬಹಳ ಸುಲಭವಾಗಿ ಔಟ್ ಆಫ್ ಔಟ್ ಸ್ಕೋರ್ ಮಾಡಿದ್ದಾರೆ. ಓದಿನ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಇವರು ತಮ್ಮ ಹತ್ತನೇ ತರಗತಿಯ ದಿನಗಳು, ಪರೀಕ್ಷೆಗೆ ತಯಾರಿ, ಪರೀಕ್ಷೆಯ ಅಂತಿಮ ಹಂತದ ಸಿದ್ಧತೆ ಈ ಎಲ್ಲದರ ಬಗ್ಗೆ ಎಚ್‌ಟಿ (ಹಿಂದೂಸ್ತಾ...