ಭಾರತ, ಏಪ್ರಿಲ್ 22 -- ದಾಳಿ ನಡೆದ ಸ್ಥಳದ ಫೋಟೋಗಳು ಲಭಿಸಿದ್ದು, ಮನಕಲಕುವಂತಿದೆ. ತನ್ನವರನ್ನು ಕಳೆದುಕೊಂಡ ಪ್ರವಾಸಿಗರು, ಅತ್ತು ಗೋಗರೆದಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಭಯೋತ್ಪಾದಕರು ಬೈಸರನ್ ಕಣಿವೆಯ ಪರ್ವತದಿಂದ ಇಳಿದು ಬಂದು, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಈ ಸ್ಥಳವು ಹಚ್ಚ ಹಸಿರಿನ ಹುಲ್ಲುಗಾವಲುಗಳನ್ನು ಹೊಂದಿರುವುದರಿಂದ ಇದನ್ನು 'ಮಿನಿ ಸ್ವಿಟ್ಜರ್ಲೆಂಡ್' ಎಂದು ಕರೆಯಲಾಗುತ್ತದೆ.

ಗಾಯಗೊಂಡ ಪ್ರವಾಸಿಗರನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಗಾಯಗೊಂಡವರನ್ನು ಸ್ಥಳಾಂತರಿಸಲು ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಸೇವೆಗೆ ಬಳಸಿದರು. ಕೆಲವು ಗಾಯಾಳುಗಳನ್ನು ಸ್ಥಳೀಯ ಜನರು ತಮ್ಮ ಕುದುರೆಗಳ ಮೇಲೆ ಹುಲ್ಲುಗಾವಲುಗಳಿಂದ ಕೆಳಗೆ ಇಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ದಕ್ಷಿಣದಲ್ಲಿರುವ ಅನಂತ್‌ನಾಗ್‌ನಲ್ಲಿರ...