ಭಾರತ, ಮಾರ್ಚ್ 30 -- ಮೆಲ್ಬೋರ್ನ್‌ನಲ್ಲಿ ನಡೆದ ನೇಹಾ ಕಕ್ಕರ್ ಸಂಗೀತ ಕಾರ್ಯಕ್ರಮದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗಿದೆ. ವೇದಿಕೆ ಮೇಕೆ ನೇಹಾ ಕಕ್ಕರ್ ಅಳುತ್ತಿರುವ ದೃಶ್ಯವಂತೂ ಸಾಕಷ್ಟು ವೀಕ್ಷಣೆಗೊಳಪಟ್ಟು ಅದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ನೇಹಾ ಕಕ್ಕರ್ ಕಾರ್ಯಕ್ರಮಕ್ಕೆ ಮೂರು ಗಂಟೆಗಳ ಕಾಲ ತಡವಾಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ನೇಹಾ ಕಕ್ಕರ್ ತಮ್ಮ ತಪ್ಪಿಲ್ಲ ಎಂದು ಬಿಂಬಿಸಿಕೊಳ್ಳುತ್ತಿದ್ದರೆ ಅತ್ತ ಆಯೋಜಕರು ನೇಹಾ ಕಕ್ಕರ್ ಸಂಗೀತ ಕಾರ್ಯಕ್ರಮದ ವಿಚಾರವಾಗಿ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಅಂದು ನೇಹಾ ಕಕ್ಕರ್ ಮೂರು ಗಂಟೆಗಳ ಕಾಲ ತಡವಾಗಿ ಆಗಮಿಸಿದ್ದರಿಂದ ನಿರಾಶೆಗೊಂಡ ಪ್ರೇಕ್ಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಗೊಂದಲದ ನಡುವೆಯೂ, ಅನಿರೀಕ್ಷಿತ ವಿಳಂಬಕ್ಕಾಗಿ ನೇಹಾ ಕಕ್ಕರ್ ಕಣ್ಣೀರು ಹಾಕುತ್ತಾ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಇಷ್ಟೆಲ್ಲ ಆದ ನಂತರವೂ ...