ಭಾರತ, ಜೂನ್ 19 -- ನಮ್ಮ ಸುತ್ತಮುತ್ತಲಿರುವ ಕೆಲವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ. ಯಾಕೋ ಏನೋ ನನಗೆ ಏನು ನೆನಪಿರುವುದಿಲ್ಲ, ಎಲ್ಲಾ ಮರೆತು ಹೋಗುತ್ತೇನೆ, ಎಷ್ಟೇ ಪ್ರಯತ್ನಪಟ್ಟರೂ ನೆನಪೇ ಆಗುವುದಿಲ್ಲ ಎಂದು ಬೇಸರ ತೋಡಿಕೊಳ್ಳುತ್ತಾರೆ. ಹಾಗಾದರೆ, ನಮ್ಮ ನೆನಪಿನ ಶಕ್ತಿ ಕುಂದುವುದಕ್ಕೆ ಕಾರಣವೇನು ಮತ್ತು ಪರಿಹಾರವೇನು ?

ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಓದಿದ್ದೆಲ್ಲಾ ಮರೆತರೆ, ವಯಸ್ಕರು ಮತ್ತು ಉದ್ಯೋಗಸ್ಥರು ಕೆಲಸ ಕಾರ್ಯಗಳನ್ನು ಮರೆಯುತ್ತಾರೆ, ವಯಸ್ಸಾದವರು ಹೆಸರು, ವಿಳಾಸಗಳನ್ನು ಮರೆಯುತ್ತಾರೆ. ಇನ್ನು ಕೆಲವರು ನಡೆದಿರುವ ಘಟನೆಗಳು, ಸಂಭಾಷಣೆಗಳನ್ನು ಮರೆಯುತ್ತಾರೆ. ಹೀಗೆ ಎಲ್ಲಾ ವಯಸ್ಸಿನ ಪ್ರತಿಯೊಬ್ಬರು ಏನನ್ನಾದರೂ ಮರೆಯುತ್ತಿರುತ್ತಾರೆ. ಹೀಗೆ ಮರೆಯುವುದಕ್ಕೆ ಕಾರಣವೇನು ಮತ್ತು ಮರೆಯುವಿಕೆಗೆ ಪರಿಹಾರವೇನು?

ಗತಕಾಲದ ನಮ್ಮ ಅನುಭವಗಳ ಮತ್ತು ಘಟನೆಗಳ ಸಂಗ್ರಹವೇ ನೆನಪುಗಳು. ಇವು ಮನಸ್ಸಿಗೆ ಮುದ ನೀಡುವ ಹಿತಕರವಾದ ವಿಷಯಗಳ ನೆನಪಾಗಿರಬಹುದು ಅಥವಾ ಬೇಸರ ಉಂಟು ಮಾಡುವ ಅಹಿತಕರವಾದ ವಿಷಯಗಳ ನೆನಪಾ...