ಭಾರತ, ಫೆಬ್ರವರಿ 23 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದ ಟಾಸ್ ವೇಳೆ ನೆದರ್ಲೆಂಡ್ಸ್ ಕ್ರಿಕೆಟ್ ತಂಡದ ಹೆಸರಿನಲ್ಲಿದ್ದ ಕೆಟ್ಟ ವಿಶ್ವದಾಖಲೆಯೊಂದನ್ನು ಭಾರತ ತಂಡ ಮುರಿದಿದೆ. ಏಕದಿನ ಕ್ರಿಕೆಟ್​ನಲ್ಲಿ 12 ವರ್ಷಗಳ ನಂತರ ಸತತವಾಗಿ ಅತಿ ಹೆಚ್ಚು ಟಾಸ್ ಸೋಲು ಕಂಡ ತಂಡ ಎಂಬ ಕುಖ್ಯಾತಿಗೆ ರೋಹಿತ್​ ಪಡೆ ಪಾತ್ರವಾಗಿದೆ. ಈ ಪೈಕಿ 9 ಪಂದ್ಯಗಳಿಗೆ ನಾಯಕ ರೋಹಿತ್​ ಶರ್ಮಾ. ಉಳಿದ 3 ಪಂದ್ಯಕ್ಕೆ ಕೆಎಲ್ ರಾಹುಲ್ ನಾಯಕನಾಗಿದ್ದರು. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲುವುದರೊಂದಿಗೆ ಈ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಾಕ್ ವಿರುದ್ಧ ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಸೋತ ಬೆನ್ನಲ್ಲೇ ಏಕದಿನದಲ್ಲಿ ಸತತ 12ನೇ ಬಾರಿಗೆ ಟಾಸ್ ಕಳೆದುಕೊಳ್ಳುವಂತಾಯಿತು. 2023ರ ಏಕದಿನ ವಿಶ್ವಕಪ್​ ಫೈನಲ್​ನಿಂದ ಆರಂಭವಾಗಿ ಇಲ್ಲಿಯ ತನಕ ಒಡಿಐ ಕ್ರಿಕೆಟ್​ನಲ್ಲಿ ಭಾರತ ಟಾಸ್ ಗೆದ್ದಿಲ್ಲ ಎ...