ಭಾರತ, ಫೆಬ್ರವರಿ 4 -- ಕಳೆದ ವರ್ಷ ಓಟಿಟಿಗಳಲ್ಲಿ ನೆಟ್‍ಫ್ಲೆಕ್ಸ್ ಹೊಸ ಕ್ರಾಂತಿಯನ್ನೇ ಮಾಡಿತ್ತು. 11 ಹೊಸ ಚಿತ್ರಗಳು, 6 ವೆಬ್‍ ಸರಣಿಗಳು, ಒಂದು ಸಾಕ್ಷ್ಯಚಿತ್ರ ಮತ್ತು 3 ಹೊಸ ಕಾರ್ಯಕ್ರಮಗಳನ್ನು ಘೋಷಿಸಿತ್ತು. ಈ ವರ್ಷ ತನ್ನ ದಾಖಲೆಯನ್ನು ನೆಟ್‍ಫ್ಲಿಕ್ಸ್ ತಾನೇ ಮುರಿದುಕೊಂಡಿದೆ. ಸೋಮವಾರ (ಫೆಬ್ರುವರಿ 3) ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಈ ವರ್ಷ ನೆಟ್‍ಫ್ಲಿಕ್ಸ್ ತನ್ನ ಈ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ (2025) 6 ಹೊಸ ಸಿನಿಮಾ, 14 ಸರಣಿಗಳು, 5 ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗುತ್ತಿದೆ.

ಸೈಫ್‍ ಅಲಿ ಖಾನ್‍ ಮಗ ಇಬ್ರಾಹಿಂ ಖಾನ್‌ ನಟನೆಯ ಮೊದಲ ಚಿತ್ರ, ಶಾರೂಖ್‍ ಖಾನ್‍ ಮಗ ಆರ್ಯನ್‍ ನಿರ್ದೇಶನದ ಮೊದಲ ಕಾರ್ಯಕ್ರಮ, 'ದಿ ಕಪಿಲ್‍ ಶರ್ಮ ಶೋ - 3', ಹಿಂದಿ ವೀಕ್ಷಕ ವಿವರಣೆ ಇರುವ WWE ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳು ಈ ವರ್ಷ ನೆಟ್‍ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಇದೇ ಮೊದಲ ಬಾರಿಗೆ 'ಸೂಪರ್ ಸುಬ್ಬು' ಎಂಬ ತೆಲುಗು ವೆಬ್‍ಸರಣಿಯನ್ನು ನೆಟ್‍ಫ್ಲಿಕ್ಸ್ ನಿರ್ಮ...