Bengaluru, ಮೇ 11 -- ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಒಂದಲ್ಲ ಎರಡಲ್ಲ ಸಾಲು ಸಾಲು ಹೊಸ ಸಿನಿಮಾಗಳು ವೀಕ್ಷಣೆಗೆ ಲಭ್ಯ ಇವೆ. ಅದರಲ್ಲೂ ಕಳೆದ ಎರಡು ವಾರಗಳಲ್ಲಿ ಸಾಕಷ್ಟು ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಆ ಪೈಕಿ ಒಂದಷ್ಟು ಸಿನಿಮಾಗಳು ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿವೆ. ಆ ಪೈಕಿ 10 ಅತ್ಯುತ್ತಮ ಸಿನಿಮಾಗಳ ಮಾಹಿತಿ ಇಲ್ಲಿದೆ.

ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ಲೇಟೆಸ್ಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ ʻಗುಡ್‌ ಬ್ಯಾಡ್‌ ಅಗ್ಲಿʼ. ಬಹು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ 246 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ: ಐಎಂಡಿಬಿಯಲ್ಲಿ 8.5 ರೇಟಿಂಗ್‌ ಪಡೆದ ಹಾರರ್‌ ಥ್ರಿಲ್ಲರ್ ಚಿತ್ರವೀಗ ಒಟಿಟಿಗೆ; ಮೊದಲ ದಿನವೇ ಟಾಪ್‌ 10 ಟ್ರೆಂಡಿಂಗ್‌ ಪಟ್ಟಿಯಲ್ಲಿ ಸ್ಥಾನ

ʻಗುಡ್‌ ಬ್ಯಾಡ್‌ ಅಗ್ಲಿʼ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 8ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್‌ ಒಟಿಟ...