ಭಾರತ, ಏಪ್ರಿಲ್ 28 -- 'ವೆಡ್‌ನಸ್‌ ಡೇ' 2022ರಲ್ಲಿ ಬಿಡುಗಡೆಯಾದ ಸೂಪರ್ ನ್ಯಾಚುರಲ್, ಹಾರರ್‌ ಕಾಮಿಡಿ ವೆಬ್‌ ಸಿರೀಸ್‌. ಇದೀಗ 3 ವರ್ಷಗಳ ಬಳಿಕ ಇದರ ಭಾಗ 2 ಬಿಡುಗಡೆಗೆ ಸಜ್ಜಾಗಿದೆ. ಏ‍ಪ್ರಿಲ್‌ 23 ರಂದು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಇದರ ಟೀಸರ್ ಬಿಡುಗಡೆಯಾಗಿದೆ. ಮೊದಲ ಸೀಸನ್ ಅದ್ಭುತವಾಗಿದ್ದು, ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು. ಇದೀಗ ವೆಡ್‌ನೆಸ್‌ ಡೇ ಸೀಸನ್ 2, ಎರಡು ಭಾಗಗಳಲ್ಲಿ ಬರಲಿದೆ ಎಂದು ತಯಾರಕರು ಹೇಳಿದ್ದಾರೆ.

ವೆಡ್‌ನಸ್ ಡೇ ಸೀಸನ್ 2ರ ಟೀಸರ್ ಭಯಾನಕವಾಗಿದೆ. ಈ ಸರಣಿಯ ಪ್ರಮುಖ ಪಾತ್ರ ಆಡಮ್ಸ್ ಹೊಸ ಸೀಸನ್‌ನಲ್ಲಿ ಇನ್ನಷ್ಟು ಭಯಾನಕವಾಗಿ ಹಾಗೂ ಅಪಾಯಕಾರಿ ಎನ್ನುವಂತೆ ಕಾಣುತ್ತಿದೆ. ಏಪ್ರಿಲ್ 23 ರ ರಾತ್ರಿ ವೆಡ್‌ನಸ್‌ ಟೀಸರ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.

'ನೀವು ಬಿಡುವು ಮಾಡಿಕೊಳ್ಳಿ, ಆಗಸ್ಟ್ 6ಕ್ಕೆ ತೆರೆ ಮೇಲೆ ಬರಲಿದೆ ವೆಡ್‌ನೆಸ್‌ ಡೇ ಸೀಸನ್ 2' ಎಂದು ಶೀರ್ಷಿಕೆ ಬರೆದುಕೊಂಡ ಟೀಸರ್ ಬಿಡುಗಡೆ ಮಾಡಿದೆ ವೆಬ್‌ ಸಿರೀಸ್ ತಂಡ.

ಇದನ್ನೂ ಓದಿ: ಕಾಮಿಡಿಯಿಂದ ಸಸ್ಪೆನ...