Puttur,Sullia,ಪುತ್ತೂರು,ಸುಳ್ಯ,ಬೆಂಗಳೂರು,Bengaluru, ಮೇ 6 -- ದಕ್ಷಿಣ ಕನ್ನಡ, ಕಾಸರಗೋಡು ಭಾಗದಲ್ಲಿ ರೂಢಿಯಂತೆ ಈ ಬಾರಿಯೂ ವಸಂತ ವೇದ ಶಿಬಿರಗಳು ನಡೆಯುತ್ತಿವೆ. ಈ ಪೈಕಿ ದಿವಂಗತ ಕೃಷ್ಣ ಭಟ್‌ ಪ್ರತಿಷ್ಠಾನ ಚೂಂತಾರು ಮತ್ತು ದ್ವಾರಕಾ ಪ್ರತಿಷ್ಠಾನ ಪುತ್ತೂರು ಮುಕ್ರಂಪಾಡಿಯ ದ್ವಾರಕಾ ಬಡಾವಣೆಯ ನಂದಗೋಕುಲದ ವಸಂತವೇದ ಶಿಬಿರದ ಉದ್ಘಾಟನೆಯ ಸಂದರ್ಭದಲ್ಲಿ ಗಮನಸೆಳೆದುದು "ವಿದ್ಯಾ ಸ್ತುತಿ" ಎಂಬ ಪುಸ್ತಕ ಬಿಡುಗಡೆ. ಕೇವಲ ಶೀರ್ಷಿಕೆಯನ್ನಷ್ಟೇ ಗಮನಿಸಿದರೆ ವಿಶೇಷವೆನಿಸದು. ಅದು ದಶಕಕ್ಕೂ ಹೆಚ್ಚು ಕಾಲ ಪ್ರತಿ ವರ್ಷ 60ಕ್ಕೂ ಹೆಚ್ಚು ಮಕ್ಕಳಿಗೆ ಊಟೋಪಚಾರ ಮಾಡಿದ ಗುರುಮಾತೆ ದಿವಂಗತ ವಿದ್ಯಾಸರಸ್ವತಿ ಚೂಂತಾರು ಅವರಿಗೆ ಅರ್ಪಣೆಯಾಗಿರುವ ಪುಸ್ತಕ ಅದು. ಸಹಜವಾಗಿಯೇ ವಿದ್ಯಾಸರಸ್ವತಿ ಅವರ ವ್ಯಕ್ತಿತ್ವ ಕುತೂಹಲ ಕೆರಳಿಸುವ ವಿಚಾರವಾಗಿ ಕಾಣುತ್ತದೆ.

ವಿದ್ಯಾ ಸರಸ್ವತಿ ಅವರ ವ್ಯಕ್ತಿ ಚಿತ್ರಣ ಗಮನಿಸುವ ಮೊದಲು ಗುರುಕುಲ ಪದ್ಧತಿ, ವಸಂತ ವೇದ ಶಿಬಿರಗಳು ಏನು ಎಂಬುದನ್ನು ಅರಿಯೋಣ. ಗುರುಕುಲ ಪದ್ಧತಿಯ ಶಿಕ್ಷಣ ಭಾರತೀಯ ಪ್ರಾಚೀನ ಪ...