ಭಾರತ, ಮೇ 17 -- ಪೋಪ್‌ ಫ್ರಾನ್ಸಿಸ್‌ ದಿವಂಗತರಾದ ಮೇಲೆ 133 ಜನ ಕಾರ್ಡಿನಲ್‌ಗಳು ಸಸ್ಟೈನ್‌ ಚಾಪೆಲ್‌ನಲ್ಲಿ ಒಗ್ಗೂಡಿ ಹೊಸ ಪೋಪ್‌ ಅನ್ನು ಚುನಾಯಿಸಿದರು (8-5-2025). ಹೊಸ ಪೋಪ್‌ ಸಂಪ್ರದಾಯದಂತೆ ತಮ್ಮ ಹಳೆಯ ಹೆಸರನ್ನು (ರಾಬರ್ಟ್‌ ಫ್ರಾನ್ಸಿಸ್‌ ಪ್ರೆವೋಸ್ಟ್)‌ ತ್ಯಜಿಸಿ ನೂನತವಾಗಿ ಹದಿನಾಲ್ಕನೇ ಲಿಯೋ (Leo XIV) ಎಂಬ ಹೆಸರನ್ನು ಪಡೆದರು. ಪೋಪ್‌ ಹದಿನಾಲ್ಕನೇ ಲಿಯೋ ಅವರು, ಮಹಡಿಯ ಮೇಲೆ ನಿಂತು ವ್ಯಾಟಿಕನ್‌ ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಜನಸ್ತೋಮದತ್ತ ಕೈಬೀಸಿ ಆಶೀರ್ವದಿಸಿದರು. ಅದು ಒಂದು ಅತ್ಯದ್ಭುತ ಲೋಕ.‌ ವಿಶ್ವದ ಎಲ್ಲ ದೇಶಗಳಿಂದ ಶ್ರೀಸಾಮಾನ್ಯರು, ಸಿಸ್ಟರ್‌ಗಳು, ಫಾದರ್‌ಗಳು ನೆರೆದಿದ್ದರು.‌ ಆ ಜನಸ್ತೋಮ ಹರ್ಷೋದ್ಗಾರದಿಂದ "ಹಬೆಮಸ್‌ ಪಾಪಮ್‌" ಎಂದು ಒಕ್ಕೊರಲಿನಿಂದ ಕೂಗಿ ಕುಣಿದಾಡಿದರು. ನಮಗೆ ಒಬ್ಬರು ಪೋಪ್‌ ದೊರೆತರು ಎಂಬುದೇ ಇದರ ಅರ್ಥ. ಅನಂತರ ಪೋಪ್‌ ಸಸ್ಟೈನ್‌ ಚಾಪೆಲ್‌ನಲ್ಲಿ ಕಾರ್ಡಿನಲ್‌ಗಳ ಜೊತೆ Thanksgiving mass ಅರ್ಪಿಸಿದರು. ಈಗ ವಿಶ್ವದ ಲ್ಯಾಟಿನ್‌ ಕ್ರೈಸ್ತರಿಗೆ ಹೊಸ ಪೋಪ್ ಪ್ರಾ...