ಭಾರತ, ಏಪ್ರಿಲ್ 24 -- ಈಗ ಲಕ್ಷಾಂತರ, ಕೋಟ್ಯಾಂತರ ಹಣ ಸಂಪಾದನೆ ಮಾಡುತ್ತಿರುವ ಸಾಕಷ್ಟು ನಟಿಯರು, ನಟರು ತಮ್ಮ ಬದುಕಿನ, ಕರಿಯರ್‌ನ ಆರಂಭದಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದರು. ತಮ್ಮ ಇತ್ತೀಚಿನ ಚಿತ್ರ 'ಚೋರಿ 2' ಬಿಡುಗಡೆಯ ಸಂಭ್ರಮದಲ್ಲಿರುವ ನಟಿ ನುಶ್ರತ್ ಭರುಚ್ಚಾ ಕೂಡ ತನ್ನ ಬದುಕಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತಾವು ಅನುಭವಿಸಿದ ಆರ್ಥಿಕ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳ ಕಷ್ಟವೇ ಇಂದಿನ ಹಣ ನಿರ್ವಹಣಾ ಕೌಶಲವನ್ನು ತಾನು ಅಳವಡಿಸಿಕೊಳ್ಳಲು ಕಾರಣವಾಯಿತು ಎಂದಿದ್ದಾರೆ.

ಬಾಲಿವುಡ್ ಬಬಲ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ನುಶ್ರತ್ ಭರುಚ್ಚಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ ಪ್ಯಾರ್ ಕಾ ಪಂಚ್‌ನಾಮಾ ಚಿತ್ರದಲ್ಲಿಯೂ ಈಕೆ ನಟಿಸಿದ್ದರು. ಸಿನಿಮಾವೊಂದರಲ್ಲಿ ನಟಿಸಲು ಚೆಕ್‌ ದೊರಕಿದ ಬಳಿಕ ತಮ್ಮ ಮುಂದಿನ ಸಂಪಾದನೆ ಹೇಗೆ ಎಂಬ ಅನಿಶ್ಚಿತತೆ ಇರುತ್ತದೆ. ಇಂತಹ ಸಮಯದಲ್ಲಿ ಹಣಕಾಸು ನಿರ್ವಹಣೆಯ ಶಿಸ್ತು ತನಗೆ ನೆರವಾಯಿತು ಎಂದು ಅವರು ಹೇಳಿದ್ದಾರೆ. "ಬಹಳ ಮುಂಚ...