ಭಾರತ, ಫೆಬ್ರವರಿ 5 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 4ರ ಸಂಚಿಕೆಯಲ್ಲಿ ಕಾಂತಮ್ಮ ಶ್ರಾವಣಿಗೆ ಸೀರೆಯೊಂದನ್ನು ಕೊಟ್ಟು ರೆಡಿ ಆಗುವಂತೆ ಹೇಳುತ್ತಾಳೆ. ಯಾರೂ ಮಾತನಾಡಿಸದ ಹೊತ್ತಿನಲ್ಲಿ ಅಕ್ಕರೆ ತೋರುತ್ತಿರುವ ಕಾಂತಮ್ಮನನ್ನು ಕಂಡು ಶ್ರಾವಣಿ ಮನಸ್ಸು ತುಂಬಿ ಹೋಗುತ್ತದೆ. ಮೊದಲ ರಾತ್ರಿಯ ಬಗ್ಗೆ ಶ್ರಾವಣಿಗೆ ತಿಳಿಸಿ ಹೇಳುವ ಕಾಂತಮ್ಮ ಹಾಲಿನ ಲೋಟ ಕೊಟ್ಟು ಸುಬ್ಬು ಕೋಣೆಗೆ ಕಳುಹಿಸುತ್ತಾರೆ.

ಕೋಣೆಯೊಳಗೆ ಬಂದ ಶ್ರಾವಣಿಗೆ ಸುಬ್ಬು ಬೇಸರದಲ್ಲಿ ಕೂತಿದ್ದು ನೋಡಿ ಪಾಪ ಪ್ರಜ್ಞೆ ಕಾಡುತ್ತದೆ. ಒಮ್ಮೆಗೆ ಅವಳ ಮನಸ್ಸಿನಲ್ಲಿ ಹಿಂದೆ ನಡೆದಿದ್ದೆಲ್ಲವೂ ಕಣ್ಮುಂದೆ ಬರುತ್ತದೆ. ತಾನು ಮದುವೆ ಮನೆಯಲ್ಲಿ ತಾಳಿ ಕಟ್ಟುವ ಸಂದರ್ಭ ತಾಳಿ ತೋರಿಸಿದ್ದು, ತಾಳಿ ಕಟ್ಟಿದ್ದು ಯಾರು ಎಂದು ತಂದೆ ಕೇಳಿದಾಗ ತಾನು ಸುಬ್ಬುವನ್ನು ತೋರಿಸಿದ್ದು, ಇತ್ತ ತಾಳಿ ಕಟ್ಟಿಸಿಕೊಂಡು ಸುಬ್ಬು ಮನೆಗೆ ಬಂದಾಗ ಇಂದ್ರಮ್ಮ ವರದನ ಮದುವೆ ವರಲಕ್ಷ್ಮೀ ಜೊತೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದು, ವಿಶಾಲಾಕ್ಷಿ ಸುಬ್ಬುವನ್ನು ತನ್ನ ಮಗ ಅಲ್ಲವೇ ಅಲ್ಲ ಎಂದಿ...