ಭಾರತ, ಮಾರ್ಚ್ 4 -- ಮಗುವಿನ ದೈಹಿಕ ಬೆಳವಣಿಗೆಯಿಂದ ಮಗುವಿನ ಮಾನಸಿಕ ಬೆಳವಣಿಗೆಯವರೆಗೆ ಎದೆ ಹಾಲು ಅಥವಾ ಸ್ತನ್ಯಪಾನ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ತಾಯಂದಿರು ಹಾಲನ್ನು ಸರಿಯಾಗಿ ಉತ್ಪಾದಿಸಲು ಹೆಣಗಾಡುತ್ತಿದ್ದಾರೆ. ಮಗುವಿಗಾಗಿ ಎದೆ ಹಾಲನ್ನು ಹೆಚ್ಚಿಸಲು ಏನು ಮಾಡಬೇಕೆಂದು ತಿಳಿಯದೆ ಬಹಳಷ್ಟು ಮಂದಿ ಚಿಂತಿತರಾಗಿದ್ದಾರೆ. ಮಗುವಿಗೆ ಸಾಕಷ್ಟು ಹಾಲು ಉತ್ಪತ್ತಿಯಾಗುತ್ತಿಲ್ಲ ಎಂಬ ಚಿಂತೆ ಹಲವು ತಾಯಂದಿರದ್ದು. ಎದೆಹಾಲು ಹೆಚ್ಚಿಸಲು ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸಬಹುದು.

ಹಾಲುಣಿಸುವ ತಾಯಂದಿರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಶಿಶುಗಳಿಗೆ ಹಾಲುಣಿಸಿದಾಗ ಮಾತ್ರ ಬೆಳವಣಿಗೆಯಾಗುತ್ತದೆ. ಮಗುವಿಗೆ ಹಸಿವಾದಾಗಲೆಲ್ಲಾ, ಹಾಲುಣಿಸಲು ಪ್ರಯತ್ನಿಸಿ. ಒಂದು ಸ್ತನದಿಂದ ಹಾಲು ಬರದಿದ್ದರೆ ಇನ್ನೊಂದು ಸ್ತನದಿಂದ ಹಾಲುಣಿಸಲು ಪ್ರಯತ್ನಿಸಿ.

ಚಿಂತಿಸಬೇಡಿ: ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ತಮ್ಮ ಮಗುವಿಗೆ ಸಾಕಷ್ಟು ಹಾಲು ನೀಡಲು ಸಾಧ್ಯವಾಗುತ್ತಿಲ್ಲ ಎಂದು ...