Bengaluru, ಮೇ 14 -- ಒಟಿಟಿಯಲ್ಲಿ ಸಾವಿರಾರು ಸಿನಿಮಾಗಳ ರಾಶಿಯೇ ಇದೆ. ಅವುಗಳಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ವೀಕ್ಷಿಸುವ ಸಿನಿಮಾಗಳನ್ನು ಹುಡುಕುವುದೇ ದೊಡ್ಡ ಕೆಲಸ. ಇದೀಗ ನೀವು ಸ್ಯಾಂಡಲ್‌ವುಡ್‌ನ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಪ್ರಿಯರಾಗಿದ್ದರೆ, ಮರ್ಡರ್‌ ಮಿಸ್ಟರಿ ಸಿನಿಮಾ ವೀಕ್ಷಕರಾಗಿದ್ದರೆ, ಆಯ್ದ ಐದು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಕ್ರೈಮ್ ಥ್ರಿಲ್ಲರ್ ಚಿತ್ರ 'ಬೀರ್‌ಬಲ್‌ ಟ್ರಯಾಲಜಿ' ಸಿನಿಮಾವನ್ನು ಎಂ.ಜಿ. ಶ್ರೀನಿವಾಸ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ರುಕ್ಮಿಣಿ ವಸಂತ್, ವಿನೀತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾವಿನ ಹಿಂದಿನ ಸತ್ಯ ತಿಳಿಯುವ ಈ ಥ್ರಿಲ್ಲರ್‌ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ: ʻನೀವು ಮಾಡಿದ್ದು ನ್ಯಾಯವಾ ರಿಷಬ್‌ ಶೆಟ್ರೆ, ರಾಕೇಶ್‌ ಪೂಜಾರಿ ಅಂತ್ಯಸಂಸ್ಕಾರಕ್ಕೂ ಬರುವಷ್ಟು ಸಮಯ ನಿಮಗಿರಲಿಲ್ಲವೇ?

2019ರಲ್ಲಿ ಬಂದ ವೃತ್ತ ಸಿನಿಮಾದಲ್ಲಿ ನಿತ್ಯ ಶ್ರೀ, ಪ್ರಕಾಶ್ ಬ...