ಭಾರತ, ಏಪ್ರಿಲ್ 21 -- ಮಾಂಸಾಹಾರ ಪ್ರಿಯರಿಗೆ ಬಿರಿಯಾನಿ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಭಿನ್ನ ಪರಿಮಳ, ರುಚಿ ಹೊಂದಿರುವ ಬಿರಿಯಾನಿ ತಯಾರಿಯಲ್ಲಿ ಮಸಾಲೆಯ ಪಾತ್ರ ದೊಡ್ಡದು. ಪ್ರಪಂಚದಾದ್ಯಂತ ಬಿರಿಯಾನಿ ಪ್ರಿಯರ ಸಂಖ್ಯೆ ಹೆಚ್ಚೇ ಇದೆ ಎಂದು ಹೇಳಬಹುದು. ವೆಜ್‌ ಬಿರಿಯಾನಿಯಾದ್ರೆ ವಿವಿಧ ಬಗೆಯ ಮಸಾಲೆಗಳು, ತರಕಾರಿ, ರೈಸ್‌ ಸೇರಿಸಿ ತಯಾರಿಸಲಾಗುತ್ತದೆ. ನಾನ್‌ವೆಜ್‌ ಬಿರಿಯಾನಿಯಾದ್ರೆ ಚಿಕನ್‌, ಮಟನ್‌, ಫಿಶ್‌ ಹೀಗೆ ಬೇರೆ ಬೇರೆ ಮಾಂಸಗಳನ್ನು ಹಾಕಿ ಬಿರಿಯಾನಿ ಮಾಡಲಾಗುತ್ತದೆ. ಬಿರಿಯಾನಿ ಸಂಪ್ರದಾಯಿಕ ಖಾದ್ಯವಾದ್ರು ಕೂಡ ಇತ್ತೀಚಿನ ದಿನಗಳಲ್ಲಿ ಇದನ್ನು ತಯಾರಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಮಧುರೈ ಗುಂಡು ಭಾಯಿ ಶೈಲಿಯ ಹೈದಾಬ್ರಾದಿ ಬಿರಿಯಾನಿ ರೆಸಿಪಿಯು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಹಲವರು ಇವರ ಬಿರಿಯಾನಿ ರುಚಿಗೆ ಫಿದಾ ಆಗಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲೂ ಈ ಬಿರಿಯಾನಿ ವಿಶೇಷ ಗಮನ ಸೆಳೆಯುತ್ತಿದೆ.

ಗುಂಡು ಭಾಯಿ ಶೈಲಿಯ ಬಿರಿಯಾನಿ ತಯಾರಿಸೋದ...