ಭಾರತ, ಫೆಬ್ರವರಿ 2 -- ನೀವು ಮಾಂಸಾಹಾರ ಪ್ರಿಯರಾಗಿದ್ದರೆ ವಾರಕ್ಕೊಮ್ಮೆಯಾದರೂ ಚಿಕನ್‌ನಿಂದ ಹೊಸ ಪಾಕವಿಧಾನವನ್ನು ಪ್ರಯತ್ನಿಸಿ. ಇಲ್ಲಿ ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ಪಾಕವಿಧಾನ ನೀಡಲಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ ಖಂಡಿತ ಇಷ್ಟವಾಗುತ್ತದೆ. ಇದು ರೊಟ್ಟಿ, ಚಪಾತಿ, ಅನ್ನ, ನಾನ್ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ಖಾದ್ಯ ರುಚಿಕರ ಮಾತ್ರವಲ್ಲ, ತಯಾರಿಸುವುದು ಕೂಡ ಸುಲಭ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಾಗ್ರಿಗಳು: ಕೋಳಿ ಮಾಂಸ- 1 ಕೆಜಿ, ಮೊಸರು- 1 ಕಪ್, ಈರುಳ್ಳಿ- 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಟೊಮೆಟೊ- 1 ಕಪ್, ಕಾಶ್ಮೀರಿ ಮೆಣಸಿನ ಪುಡಿ- 2 ಚಮಚ, ಅರಿಶಿನ- 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಗರಂ ಮಸಾಲೆ- ½ ಚಮಚ, ಕಸೂರಿ ಮೇಥಿ- 1 ಚಮಚ, ಕೊತ್ತಂಬರಿ ಬೀಜ- 2 ಚಮಚ, ಕಾಳುಮೆಣಸು- 1 ಚಮಚ, ಚೆಕ್ಕೆ- 1 ಸಣ್ಣ ತುಂಡು, ಜೀರಿಗೆ- 1 ಚಮಚ, ಒಣ ಮೆಣಸಿನಕಾಯಿ- 10, ತುಪ್ಪ- 3 ಚಮಚ, ಎಣ್ಣೆ- 3 ಚಮಚ, ಬಿರಿ...