Bengaluru, ಫೆಬ್ರವರಿ 21 -- ಕಬ್ಬು ಅಥವಾ ತಾಳೆ ರಸದಿಂದ ತಯಾರಿಸಿದ ನೈಸರ್ಗಿಕ ಸಿಹಿಕಾರಕವಾದ ಬೆಲ್ಲವನ್ನು ಅದರ ವಿಶಿಷ್ಟ ಸುವಾಸನೆ ಹಾಗೂ ಪೌಷ್ಟಿಕಾಂಶದ ಪ್ರಯೋಜನಗಳಿಗಾಗಿ ವ್ಯಾಪಕವಾಗಿದೆ ಬಳಸಲಾಗುತ್ತದೆ. ಬೆಲ್ಲವು ನಮ್ಮ ಆಹಾರದಲ್ಲಿ ಬಹಳ ಮಹತ್ವದ ಸ್ಥಾನ ಪಡೆದಿದೆ. ಇದು ಶುದ್ಧವಾಗಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವೊಂದು ಬೆಲ್ಲದಲ್ಲಿ ರಾಸಾಯನಿಕಗಳು ಅಥವಾ ಕೃತಕ ಬಣ್ಣಗಳ ಮಿಶ್ರಣವನ್ನು ಸೇರಿಸಲಾಗುತ್ತದೆ. ಹಾಗಾಗಿ, ಬೆಲ್ಲದ ಶುದ್ಧತೆಯನ್ನು ಪರೀಕ್ಷಿಸುವುದು ಬಹಳ ಮುಖ್ಯ. ಈ ಕಾರ್ಯವನ್ನು ಬಹಳ ಸರಳವಾದ ಕೆಲವು ವಿಧಾನಗಳ ಮೂಲಕ ಮನೆಯಲ್ಲಿಯೇ ಮಾಡಬಹುದು. ಬೆಲ್ಲದ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೃತಕ ಬಣ್ಣದ ಪರೀಕ್ಷೆ: ಬೆಲ್ಲದ ಬಣ್ಣವನ್ನು ಗಮನಿಸಿ. ಸಹಜವಾಗಿ ಶುದ್ಧ ಬೆಲ್ಲವು ಕಂದು ಅಥವಾ ಬಂಗಾರದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅದರ ಬಣ್ಣ ನೈಜವೋ ಅಥವಾ ನಕಲಿಯೋ ಎಂಬುದನ್ನು ಪರೀಕ್ಷಿಸುವುದು ಬಹಳ ಮುಖ್ಯ.ಅದು ಹೊಳೆಯುತ್ತಿದ್ದರೆ ಅದರಲ್ಲಿ ಕೃತಕ ಬಣ್ಣದ ಮಿ...