ಭಾರತ, ಮೇ 12 -- ಇದು ಮಾವಿನ ಹಣ್ಣಿನ ಸೀಸನ್‌. ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬರುವುದನ್ನೇ ಹಲವರು ಕಾಯುತ್ತಿರುತ್ತಾರೆ. ಮಲ್ಲಿಕಾ, ಬೈಂಗಪಲ್ಲಿ, ಸಿಂಧೂರ, ತೋತಾಪುರಿ ಹೀಗೆ ಮಾವಿನಲ್ಲಿ ಹಲವು ವಿಧಗಳು. ಮಾವಿನ ರುಚಿಗೆ ಮನಸೋಲದವರಿಲ್ಲ. ಆದರೆ ನಾವು ಖರೀದಿಸುವ ಎಲ್ಲಾ ಮಾವಿನ ಹಣ್ಣುಗಳು ತಿನ್ನಲು ಯೋಗ್ಯವೇ ಎಂಬ ಪ್ರಶ್ನೆ ಇತ್ತೀಚೆಗೆ ಎದುರಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಾವಿನ ಹಣ್ಣಿಗೆ ರಾಸಾಯನಿಕ ಸಂಯಕ್ತ ಕ್ಯಾಲ್ಸಿಯಂ ಕಾರ್ಬೈಡ್‌ ಎಂಬ ವಸ್ತುವನ್ನು ಬಳಸಿ ಹಣ್ಣು ಮಾಡಲಾಗುತ್ತಿದೆ. ಈ ರೀತಿ ಹಣ್ಣಾಗಿಸಿದ ಮಾವು ತಿನ್ನುವುದರಿಂದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ, ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಮಾವಿನ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡಿದಾಗ ಅವು ನೈಸರ್ಗಿಕವಾಗಿ ಹಣ್ಣಾಗುತ್ತವೆ, ಇದು ನಿರುಪದ್ರವ ಸಸ್ಯ ಹಾರ್ಮೋನ್. ಆದರೆ ಈ ಪ್ರಕ್ರಿಯೆಗೆ ಹೆಚ್ಚು ಸಮಯ ಹಿಡಿಯುತ್ತದೆ. ಆ ಕಾರಣದಿಂದ ಬೇಗ ಹಣ್ಣಾಗಿಸಿ, ಮಾರಾಟ ಮಾಡುವ ದುರದ್ದೇಶದಿ...