ಭಾರತ, ಮಾರ್ಚ್ 3 -- ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ, ಪನೀರ್ ಬಿರಿಯಾನಿ ಇತ್ಯಾದಿ ನೀವು ತಿಂದಿರಬಹುದು. ಎಂದಾದರೂ ಮೀನಿನ ಬಿರಿಯಾನಿ ಟ್ರೈ ಮಾಡಿದ್ದೀರಾ? ಮೀನು ತುಂಬಾ ಬೇಗ ಬೇಯುವುದರಿಂದ ಇದು ಮೃದುವಾಗುತ್ತದೆ. ಹೀಗಾಗಿ ಬಿರಿಯಾನಿ ಮಾಡಲು ಕಷ್ಟ ಎಂದು ಹಲವರು ಈ ರೆಸಿಪಿಯನ್ನು ಪ್ರಯತ್ನಿಸುವುದಿಲ್ಲ. ಆದರೆ, ಇದನ್ನು ಕುಕ್ಕರ್‌ನಲ್ಲಿ ಸರಳವಾಗಿ ಬೇಯಿಸಬಹುದು. ಕುಕ್ಕರ್‌ನಲ್ಲಿ ಮೀನು ಬಿರಿಯಾನಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಮೀನು - ಹತ್ತು, ಮೆಣಸಿನ ಪುಡಿ- ಎರಡು ಚಮಚ, ಅರಿಶಿನ - ಅರ್ಧ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಗರಂ ಮಸಾಲೆ - ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ - ಎರಡು ಚಮಚ, ನಿಂಬೆ ರಸ - ಒಂದು ಚಮಚ, ಹಸಿ ಮೆಣಸಿನಕಾಯಿ - ಎರಡು, ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು, ದಾಲ್ಚಿನ್ನಿ - ಎರಡು ಸಣ್ಣ ತುಂಡು, ಏಲಕ್ಕಿ - ಮೂರು, ಲವಂಗ - ಐದು, ಬಿರಿಯಾನಿ ಎಲೆ - ಎರಡು, ಕಲ್ಲು ಹೂವು - 2 ಚಮಚದಷ್ಟು, ಈರುಳ...