ಭಾರತ, ಮೇ 18 -- ಭುವನೇಶ್ವರ: ನೀನೆ ಸಾಕಿದ ಗಿಣಿ,ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೊ ಎನ್ನುವ ಕನ್ನಡದ ಹಾಡು ನೆನಪಿರಬಹುದು. ಆ ಹಾಡಿನ ಪ್ರತಿರೂಪ ಎನ್ನುವಂತಹ ಘಟನೆ ಒಡಿಶಾದಲ್ಲಿ ನಡೆದಿದೆ. ಆಕೆ ಮೂರು ವರ್ಷದ ಬಾಲಕಿ. ಅನಾಥೆಯಾಗಿ ರಸ್ತೆಯಲ್ಲಿ ಬಿದ್ದಿದ್ದಳು. ಮಕ್ಕಳಿಲ್ಲದ ದಂಪತಿ ಆ ಮಗುವನ್ನು ದತ್ತು ಪಡೆದು ಪ್ರೀತಿಯಿಂದಲೇ ಬೆಳೆಸಿದರು.ಆದರೆ ಆಕೆಗಿನ್ನೂ 13 ವರ್ಷ. ಈ ವಯಸ್ಸಿನಲ್ಲಿ ಚೆನ್ನಾಗಿ ಓದುತ್ತಿರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಮ್ಮನನ್ನೇ ಕೊಲ್ಲಿಸಿದ್ದಾಳೆ. ಅಲ್ಲದೇ ಮನೆಯಲ್ಲಿ ಹಣ, ಚಿನ್ನಾಭರಣವನ್ನೆಲ್ಲಾ ದೋಚಿದ್ದಾಳೆ. ಅಮ್ಮನಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಹೇಳಿ ನಾಟಕವಾಡಿ ಮೂರು ವಾರದ ನಂತರ ಈಗ ಸಿಕ್ಕಿಬಿದ್ದಿದ್ದಾಳೆ.
ಘಟನೆ ನಡೆದಿರುವುದು ಒಡಿಶಾದ ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿ. ರಾಜಲಕ್ಷ್ಮಿ ಕರ್ ಕೊಲೆಯಾದ ಮಹಿಳೆ. ಪೊಲೀಸರ ಪ್ರಕಾರ, 13 ವರ್ಷದ 8 ನೇ ತರಗತಿಯ ವಿದ್ಯಾರ್ಥಿನಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಏಪ್ರಿಲ್ 29 ರಂದು ಪರಲಖೆಮುಂಡಿ ಪಟ್ಟಣದಲ್ಲಿರು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.