ಭಾರತ, ಮಾರ್ಚ್ 25 -- ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಸೋಲಿನೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 4 ವಿಕೆಟ್​​ಗಳಿಂದ ಸೋಲನುಭವಿಸಿರುವ ಮುಂಬೈ, ತನ್ನ 2ನೇ ಪಂದ್ಯವನ್ನು ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೆಣಸಲಿದೆ. ಮುಂಬೈ ಭಾನುವಾರ (ಮಾರ್ಚ್ 23) ಚೆಪಾಕ್​ನಲ್ಲಿ ಸೋತಿರಬಹುದು, ಆದರೆ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರು (Vignesh Puthur) ತಮ್ಮ ಬೌಲಿಂಗ್​ನಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಇನ್ನೂ ದೇಶೀಯ ಕ್ರಿಕೆಟ್ ಆಡದ ಈತ ನಿಜವಾಗಲೂ 'ಮಲಪ್ಪುರಂ ಗೋಲ್ಡ್'​! ಅದಕ್ಕೆ ಕಾರಣ ಇಲ್ಲಿದೆ.

ಕೇರಳದ ಮಲಪ್ಪುರಂನ 24 ವರ್ಷದ ವಿಘ್ನೇಶ್, ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿಯುವುದರೊಂದಿಗೆ ಐಪಿಎಲ್​ಗೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿದರು. 4 ಓವರ್ಗಳಲ್ಲಿ 32 ರನ್​ಗೆ 3 ನಿರ್ಣಾಯಕ ವಿಕೆಟ್​ ಪಡೆದರೂ ಗೆಲುವು ಮುಂಬೈಗೆ ಸಿಗಲಿಲ್ಲ. ಸಿಎಸ್​ಕೆ ನಾಯಕ ಋತುರಾಜ್ ಗಾಯಕ್ವಾಡ್ (53), ಶಿವಂ ...