ಭಾರತ, ಮೇ 5 -- ನೀಟ್ 2025: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಭಾನುವಾರ (ಮೇ 4) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಂಡರ್‌ಗ್ರಾಜುವೇಟ್‌ (ನೀಟ್ ಯುಜಿ)ಯನ್ನು ನಡೆಸಿತು. ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುತ್ತಿರುವ ಭಾರತದ 22.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆ ಬರೆದವರು ಹಾಗೂ ಕ್ಷೇತ್ರದ ಪರಿಣತರು ಈ ಪರೀಕ್ಷೆಗಳು ಹೇಗಿದ್ದವು ಎಂಬ ನೋಟವನ್ನು ಒದಗಿಸಿದ್ದಾರೆ. ನೀಟ್‌ ಯುಜಿ 2025ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವ ಶಾಸ್ತ್ರದ ಪೇಪರ್‌ಗಳಿದ್ದು, ಹಿಂದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಸು ಕಷ್ಟವಿತ್ತು ಎಂದು ಪರೀಕ್ಷೆ ಬರೆದವರ ಪೈಕಿ ಅನೇಕರು ಹೇಳಿಕೊಂಡಿದ್ದಾರೆ.

ನೀಟ್ ಯುಜಿ 2025ರ ಫಿಸಿಕ್ಸ್ ಅಥವಾ ಭೌತಶಾಸ್ತ್ರ ಪೇಪರ್ ಮೂರು ವಿಷಯಗಳಿಗೆ ಹೋಲಿಸಿದರೆ ಬಹಳ ಕಷ್ಟವಿತ್ತು ಎಂದು ಪರೀಕ್ಷಾರ್ಥಿಗಳು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಬೇಕಾದರೆ ಹೆಚ್ಚಿನ ಪರಿಕಲ್ಪನಾ ತಿಳಿವಳಿಕೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಅಗತ್ಯ ಕಂಡುಬ...