ಭಾರತ, ಮೇ 5 -- ನೀಟ್ ಯುಜಿ 2025; ಭಾರತದಾದ್ಯಂತ ನೀಟ್ ಯುಜಿ ಪರೀಕ್ಷೆ ಭಾನುವಾರ (ಮೇ 4) ರಂದು ನಡೆಯಿತು. ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುತ್ತಿರುವ ಭಾರತದ 22.7 ಲಕ್ಷ ವಿದ್ಯಾರ್ಥಿಗಳು ನೀಟ್‌ ಯುಜಿ ಪರೀಕ್ಷೆ ಬರೆದರು. ಪರೀಕ್ಷೆ ಬರೆದವರು ಹಾಗೂ ಕ್ಷೇತ್ರದ ಪರಿಣತರು ಈ ಪರೀಕ್ಷೆಗಳು ಹೇಗಿದ್ದವು ಎಂಬ ನೋಟವನ್ನು ಒದಗಿಸಿದ್ದಾರೆ. ಮೂರು ಪೇಪರ್‌ಗಳ ಪೈಕಿ ಜೀವಶಾಸ್ತ್ರ (ಬಯಾಲಜಿ) ಪೇಪರ್ ಅತ್ತ ಸುಲಭವೂ ಇರಲಿಲ್ಲ, ಇತ್ತ ಕಷ್ಟವೂ ಅಲ್ಲ. ಆದರೆ ಸುದೀರ್ಘವಾಗಿದ್ದು, ಹುಷಾರಾಗಿ ಪ್ರಶ್ನೆಗಳನ್ನು ಓದಿ ಉತ್ತರ ಬರೆಯಬೇಕಾಗಿತ್ತು. ಸ್ವಲ್ಪ ಯಾಮಾರಿದರೂ ಅಂಕ ಕಡಿಮೆಯಾಗೋದು ಖಚಿತ ಎಂದು ಪರೀಕ್ಷೆ ಬರೆದ ಪರೀಕ್ಷಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

ಜೀವಶಾಸ್ತ್ರ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ಪರಿಕಲ್ಪನಾತ್ಮಕವಾಗಿ ಕಷ್ಟಕರವಲ್ಲದಿದ್ದರೂ, ಪೇಪರ್‌ನ ಪ್ರಶ್ನೆಗಳು ದೀರ್ಘ ಉತ್ತರಗಳನ್ನೇ ಬಯಸುವಂತೆ ಇದ್ದವು. ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಉತ್ತರ ಬರೆಯಬೇಕಾದರೆ, ಅವುಗಳನ್ನು ಬಹಳ ಎಚ್ಚರಿಕೆಯಿಂದ ಓದಬೇಕಾದ ಅವಶ್ಯ...