ಭಾರತ, ಮೇ 5 -- ನೀಟ್‌ 2025 ರಸಾಯನ ಶಾಸ್ತ್ರ ಪೇಪರ್‌: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಭಾನುವಾರ (ಮೇ 4) ವೈದ್ಯಕೀಯ ಪ್ರವೇಶಕ್ಕಾಗಿ ನೀಟ್ ಅನ್ನು ನಡೆಸಿತ್ತು. ನೀಟ್ ಪರೀಕ್ಷೆಯಲ್ಲಿ ರಸಾಯನ ಶಾಸ್ತ್ರ ಪೇಪರ್‌ ಹೇಗಿತ್ತು ಎಂಬ ಕುತೂಹಲ ಸಹಜ. ಪರೀಕ್ಷಾರ್ಥಿಗಳು ಮತ್ತು ಪರಿಣತರು ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಫಿಸಿಕ್ಸ್‌ಗೆ ಹೋಲಿಸಿದರೆ ಇದು ಒಕೆ ಒಕೆ ಎಂಬ ಮಾತುಗಳನ್ನಾಡಿದ್ದಾರೆ. ಆದಾಗ್ಯೂ, ರಸಾಯನ ಶಾಸ್ತ್ರ ಪೇಪರ್ ಸ್ವಲ್ಪ ಸುದೀರ್ಘವಾಗಿತ್ತು. ನಿಖರ ಮತ್ತು ಎಚ್ಚರಿಕೆಯ ಓದುವಿಕೆಯನ್ನು ಪ್ರಶ್ನೆ ಪತ್ರಿಕೆ ಬಯಸಿತ್ತು. ಸಣ್ಣ ತಪ್ಪು ವ್ಯಾಖ್ಯಾನವೂ ಅಂಕ ಕಡಿತಕ್ಕೆ ಕಾರಣವಾಗಬಹುದಾಗಿದ್ದ ಕಾರಣ, ಪರೀಕ್ಷಾರ್ಥಿಗಳು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಓದಿ ಉತ್ತರ ಬರೆಯಬೇಕಾಗಿತ್ತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಸೈದ್ಧಾಂತಿಕ ವಿಭಾಗ ತುಲನಾತ್ಮಕವಾಗಿ ನೋಡಿದರೆ ಸುಲಭವಿತ್ತು. ಆದರೆ, ಅನ್ವಯಿಕ ಪ್ರಶ್ನೆಗಳು ಬಹಳ ಕಷ್ಟ ಇದ್ದವು ಎಂಬುದರ ಕಡೆಗೆ ಪರಿಣತರು ಗಮನಸೆಳೆದಿದ್ದಾರೆ.

ಆಕಾಶ್ ಎಜ...