ಭಾರತ, ಮೇ 1 -- ನೀಟ್ ಯುಜಿ ಪೇಪರ್ ಸೋರಿಕೆ ವದಂತಿ: ನೀಟ್ 2025 ಮೇ 4 ರಂದು ನಡೆಯಲಿದ್ದು, ಇದಕ್ಕೂ ಮುನ್ನ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನೀಟ್ ಯುಜಿ ಪೇಪರ್ ಸೋರಿಕೆ ವದಂತಿ ಸವಾಲುಗಳನ್ನು ಎದುರಿಸಿದೆ. 1,500ಕ್ಕೂ ಹೆಚ್ಚು ನೀಟ್ ಯುಜಿ ಪೇಪರ್ ಸೋರಿಕೆ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ವಿಶೇಷವಾಗಿ ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡಿವೆ. ಇದನ್ನು ಗುರುತಿಸಿದ ಎನ್‌ಟಿಎ, ಅವುಗಳನ್ನು ತೆರವುಗೊಳಿಸುವುದಕ್ಕೆ ಕ್ರಮ ತೆಗೆದುಕೊಂಡಿದೆ ಎಂದು ಕೆಲವು ಅನಾಮಿಕ ಮೂಲ ನೀಡಿದ ಮಾಹಿತಿ ಆಧರಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಎನ್‌ಟಿಎ ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುತ್ತಿದೆ. ಮತ್ತು ಅಭ್ಯರ್ಥಿಗಳನ್ನು ದಾರಿ ತಪ್ಪಿಸಲು ಅಥವಾ ಪರೀಕ್ಷಾ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ಪ್ರಯತ್ನಿಸುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಖಚಿತಪಡಿಸಿದೆ. ನೀಟ್ (ಯುಜಿ) 2025 ಪರೀಕ್ಷಾ ಪ್ರಕ್ರಿಯೆಯ ಸಮಗ್ರತೆಯನ್ನು ರಕ್ಷಿಸುವ ನಿರ್ಣಾಯಕ ಕ್ರಮದಲ್ಲಿ, ನೀಟ್ (ಯುಜಿ) 2025 ಪ್ರಶ್ನೆ ಪತ್ರಿಕ...
Click here to read full article from source
To read the full article or to get the complete feed from this publication, please
Contact Us.