New Delhi, ಮೇ 23 -- ನೀಟ್ ಪಿಜಿ 2025: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶದಲ್ಲಿ ದೊಡ್ಡ ಪ್ರಮಾಣದ ಸೀಟ್ ಬ್ಲಾಕಿಂಗ್ ಅಭ್ಯಾಸ ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇದನ್ನು ತಡೆಗಟ್ಟಲು, ಎಲ್ಲಾ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಅರ್ಹತಾ - ಪ್ರವೇಶ ಪರೀಕ್ಷೆ, ಸ್ನಾತಕೋತ್ತರ (ನೀಟ್ ಪಿಜಿ) ಕೌನ್ಸೆಲಿಂಗ್ಗೆ ಮೊದಲು ಶುಲ್ಕ ವಿವರವನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ನ್ಯಾಯಪೀಠವು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಸೀಟ್ ಬ್ಲಾಕಿಂಗ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆದೇಶಿಸಿದೆ. ಇದರಂತೆ, ಸೀಟ್ ಬ್ಲಾಕ್‌ ಮಾಡುವ ವಿದ್ಯಾರ್ಥಿಗಳ ಭದ್ರತಾ ಠೇವಣಿ ಮುಟ್ಟುಗೋಲು ಹಾಕುವುದಕ್ಕೆ ಸೂಚನೆ ನೀಡಲಾಗಿದೆ. ಅಲ್ಲದೆ, ಅವರು ಭವಿಷ್ಯದ ನೀಟ್-ಪಿಜಿ ಪರೀಕ್ಷೆ ಬರೆಯದಂತೆ ಅನರ್ಹರಾಗುತ್ತಾರೆ.

ಸೀಟ್ ಬ್ಲಾಕಿಂಗ್ ಸಂಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿ...