Bangalore, ಏಪ್ರಿಲ್ 19 -- ಕರ್ನಾಟಕದಲ್ಲಿ ಈಗಾಗಲೇ ಪಿಯುಸಿ ಪರೀಕ್ಷೆ ಮುಗಿದು ಫಲಿತಾಂಶವೂ ಬಂದಿದೆ. ವೃತ್ತಿಪರ ಕೋರ್ಸ್‌ಗಳಿಗೆ ಹೋಗುವವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಯುಜಿ ಸಿಇಟಿ 2025 ಪರೀಕ್ಷೆಯನ್ನು ಮುಗಿಸಿಯಾಯ್ತು. ಇನ್ನೇನಿದ್ದರೂ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಹೋಗ ಬಯಸುವವರಿಗೆ ನೀಟ್‌ ಪರೀಕ್ಷೆ (NEET UG 2025) ಬಾಕಿಯಿದೆ. ಮೊದಲಿನಿಂದಲೂ ಮೇ ಮೊದಲ ಭಾನುವಾರದಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೀಟ್‌ ಪರೀಕ್ಷೆಯನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷದ ಮೇ 4ರಂದು ನೀಟ್‌ ಪರೀಕ್ಷೆ ನಿಗದಿಯಾಗಿದೆ. ಅಡ್ಮಿಟ್‌ ಕಾರ್ಡ್‌ ಡೌನ್‌ಲೌಡ್‌ ಸೇರಿದಂತೆ ಹಲವು ಸೂಚನೆಗಳನ್ನು ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ನೀಡಲಾಗಿದೆ. ಕೊನೆ ಹಂತದ ತಯಾರಿ, ಪರೀಕ್ಷೆಗೆ ಹೋಗುವ ಮುನ್ನ ಮಾಡಿಕೊಳ್ಳಬೇಕಾದ ಸಿದ್ದತೆ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಹಲವು ಸೂಚನೆಗಳನ್ನು ನೀಡಿದೆ.

2025 ರ ಪದವಿಪೂರ್ವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆಯಲ್ಲಿ ಎದುರಿಸುತ್ತಿರುವ ಅಭ...