Bengaluru, ಜನವರಿ 28 -- ಪ್ರೀತಿಪಾತ್ರರೊಂದಿಗೆ ಪ್ರವಾಸ ಹೋಗಿ ಬರೋದು ಅಂದ್ರೆ ಯಾರು ತಾನೇ ಬೇಡ ಅಂತಾರೆ, ಅದರಲ್ಲೂ ಇಷ್ಟಪಟ್ಟವರೊಂದಿಗೆ ಇಷ್ಟಪಟ್ಟ ಸ್ಥಳಗಳಿಗೆ ಹೋದರೆ ಆ ಟ್ರಿಪ್‌ ಖುಷಿಯನ್ನು ವ್ಯಕ್ತಪಡಿಸೋಕೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಹೊರಗೆ ಟ್ರಿಪ್‌ ಹೋದಾಗ ಹೋಟೆಲ್‌, ರೆಸಾರ್ಟ್‌ಗಳನ್ನು ಬುಕ್‌ ಮಾಡುತ್ತೇವೆ. ಆದರೆ ನೀವು ಎಂದಾದರೂ ಕ್ಯಾಂಪ್‌ನಲ್ಲಿ ಉಳಿದುಕೊಂಡಿದ್ದೀರಾ? ಪ್ರಕೃತಿ ನಡುವೆ ನೀವು ಕ್ಯಾಂಪಿಂಗ್‌ ಮಾಡಿದ್ರೆ ನಿಜಕ್ಕೂ ಅದೊಂಥರಾ ಥ್ರಿಲ್‌ ಬಿಡಿ.

ಕ್ಯಾಂಪ್‌ ಹಾಕೋಕೆ‌ ಅದನ್ನು ಖರೀದಿಸಬೇಕು, ಹೋದ ಕಡೆಯೆಲ್ಲಾ ತೆಗೆದುಕೊಂಡು ಹೋಗಬೇಕು ಅದೆಲ್ಲಾ ಕಷ್ಟ ಎನ್ನಬೇಡಿ, ಅದೆಲ್ಲಾ ನಿಮಗೆ ಬಾಡಿಗೆಗೆ ಸಿಗುತ್ತೆ, ಒಂದು ದಿನಕ್ಕೆ ಇಂತಿಷ್ಟು ಹಣ ಪಾವತಿಸಿ ನೀವು ಕ್ಯಾಂಪ್‌ನಲ್ಲಿ ಉಳಿದುಕೊಳ್ಳಬಹುದು. ಆ ರೀತಿ ಸ್ಥಳ ಎಲ್ಲಿದೆ ಅಂತೀರಾ? ಇನ್ನೆಲ್ಲೋ ಅಲ್ಲ ಕರ್ನಾಟಕದ ಬಹುತೇಕ ಪ್ರವಾಸಿ ತಾಣಗಳಲ್ಲಿ ನೀವು ಈ ಕ್ಯಾಂಪಿಂಗ್‌ ಅನುಭವ ಮಾಡಬಹುದು. ಅದರಲ್ಲೂ ಚಿಕ್ಕಮಗಳೂರು, ಸಕಲೇಶಪುರಗಳಲ್ಲಿ ಇಂತಹ ಸಾಕಷ್ಟು ಕ್ಯಾಂಪಿಂಗ...