ಭಾರತ, ಏಪ್ರಿಲ್ 25 -- ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಎಂಗೇಜ್‌ಮೆಂಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಯಶವಂತ್‌ ರೆಡ್ಡಿ ಜತೆ ಕಳೆದ ವರ್ಷ ಇದೇ ದಿನ ಎಂಗೇಜ್‌ಮೆಂಟ್‌ ಆಗಿದ್ದರು. ಇವರ ಎಂಗೇಜ್‌ಮೆಂಟ್‌ಗೆ ಏಪ್ರಿಲ್‌ 25ರಂದು ಮೊದಲ ಅನಿವರ್ಸರಿಯ ಖುಷಿ.

ಯಶವಂತ್‌ ರೆಡ್ಡಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಹಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ.

ಬಿಗ್‌ಬಾಸ್‌ ತೆಲುಗಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ಚೆಲುವೆ ಶೋಭಾ ಶೆಟ್ಟಿಗೂ ಯಶವಂತ್‌ ರೆಡ್ಡಿಗೂ ಕಳೆದ ವರ್ಷ ನಿಶ್ವಿತಾರ್ಥ ನಡೆದಿದೆ. ಶೋಭಾ ಶೆಟ್ಟಿ ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸಿದ್ದರು.

ತೆಲುಗಿನಲ್ಲಿ ಶೋಭಾ ಶೆಟ್ಟಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕಾರ್ತಿಕ ದೀಪಂ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇವರು ಬಿಗ್‌ಬಾಸ್‌ ತೆಲುಗು ಸೀಸನ್‌ ...