ಭಾರತ, ಮಾರ್ಚ್ 12 -- ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ತಿಳಿದಿತ್ತು. ತಾವಿಬ್ಬರೂ ಒಟ್ಟಾಗಿ ಒಂದು ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ವಿಚಾರವನ್ನೂ ಸಹ ಅವರು ಹಂಚಿಕೊಂಡಿದ್ದರು. ನಾವಿಬ್ಬರು ಬೇರೆ ಬೇರೆಯಾದರೂ ಸಹ ಈ ಕೆಲಸಕ್ಕಾಗಿ ಒಂದಾಗುತ್ತೇವೆ. ನಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡೂ ಸಹ ಬೇರೆ ಬೇರೆ ಎಂದು ಹೇಳಿದ್ದರು. ಆ ಮಾತಿಗೆ ತಕ್ಕಂತೆಯೇ ಅವರಿಬ್ಬರೂ ಸಹ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಿನಿಮಾದ ಕೊನೆಯ ದಿನದ ಶೂಟಿಂಗ್ ಮುಗಿದಿದೆ. ಈ ಸಂದರ್ಭದಲ್ಲಿ ನಿವೇದಿತಾ ಗೌಡ ಭಾವುಕರಾಗಿದ್ದಾರೆ.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರೂ ಅಪ್ಪಿಕೊಳ್ಳುವ ದೃಶ್ಯವೊಂದು ಸಾಕಷ್ಟು ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ಸಾಕಷ್ಟು ಜನರು ನಿವೇದಿತಾ ಮತ್ತು ಚಂದನ್ ಶೆಟ್ಟಿ ಒಂದಾಗ್ತಾರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದು ಕೇವಲ ಸಿನಿಮಾದ ಶೂಟಿಂಗ್ ದೃಶ್ಯವಷ್ಟೇ ಆಗಿದೆ. ಇದು ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿದ್ದು, ಅದು ಅಭಿನಯ ...